ಮದುವೆ ಸಮಾರಂಭದಲ್ಲಿ ಭಾಗವಹಿಸಿದವರಿಗೆ ಹೋಂ ಕ್ವಾರಂಟೈನ್…
ಸುಳ್ಯ: ಮಲೇಶಿಯಾದಿಂದ ಬಂದು ಮಂಗಳೂರಿನಲ್ಲಿ ಹೋಟೆಲ್ ಕ್ವಾರಂಟೈನಲ್ಲಿದ್ದ ವ್ಯಕ್ತಿ ಅರಂತೋಡು ತನ್ನ ಸಂಬಂಧಿಕರ ಮನೆಗೆ ಬಂದು ನಂತರ ಮದುವೆ ಸಮಾರಂಬವೊಂದಕ್ಕೆ ಬಂದಿದ್ದ ಕಾರಣ ಸಮಾರಂಭದಲ್ಲಿ ಭಾಗವಹಿಸಿದ ಇತರ 50ಕ್ಕೂ ಹೆಚ್ಚಿನ ಜನರಿಗೆ ಹೋಮ್ ಕ್ವಾರಂಟೈನ್ ನಲ್ಲಿರಲು ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.
ಮದುವೆ ಮನೆಯಲ್ಲಿದ್ದ ಎಲ್ಲರನ್ನು ಪತ್ತೆ ಹಚ್ಚಿ ವಿಳಾಸ ಕಂಡು ಹಿಡಿದು ಹೋಮ್ ಕ್ವಾರಂಟೈನ್ಲ್ಲಿರಲು ಸೂಚಿಸಲಾಗಿದೆ ಎಂದು ಅರಂತೋಡು ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ತಿಳಿಸಿದ್ದಾರೆ.