ಆಶಾ ಕಾರ್ಯಕರ್ತೆಯರಿಗೆ ಚ್ಯವನಪ್ರಾಶ್ ವಿತರಣೆ…
ಬಂಟ್ವಾಳ: ಬಂಟ್ವಾಳ ತಾಲೂಕಿನ ಆಶಾ ಕಾರ್ಯಕರ್ತೆಯರಿಗೆ ಸರಕಾರದ ಆಯುಷ್ ಇಲಾಖೆಯ ವತಿಯಿಂದ ಆಯುಷ್ ಇಲಾಖೆಯ ವೈದ್ಯಾಧಿಕಾರಿ ಡಾ| ಮಣಿಕರ್ಣಿಕ ಇವರ ನೇತೃತ್ವದಲ್ಲಿ ಆಯುರ್ವೇದದಲ್ಲಿ ಶ್ರೇಷ್ಠವಾದ ಚ್ಯವನಪ್ರಾಶ್ ಲೇಹ್ಯವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಶಾಸಕರ ಕಚೇರಿಯಲ್ಲಿ ಸಾಂಕೇತಿಕವಾಗಿ ವಿತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈಗಾಗಲೇ ಕೊರೊನಾ ವಿರುದ್ದ ಹಗಲಿರುಳು ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಉದ್ದೇಶದಿಂದ ಚ್ಯವನಪ್ರಾಶನವನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಬಂಟ್ವಾಳ ತಾಲೂಕಿನಲ್ಲಿ ಇಂದಿನಿಂದ ಒಟ್ಟು 351 ಆಶಾಕಾರ್ಯಕರ್ತೆಯರಿಗೆ ಆಯುಷ್ ಇಲಾಖೆಯ ವತಿಯಿಂದ ಚ್ಯವನಪ್ರಾಶನವನ್ನುವಿತರಿಸಲಾಗುತ್ತದೆ.
ಚ್ಯವನಪ್ರಾಶದಲ್ಲಿ ನೆಲ್ಲಿಕಾಯಿ, ಅಮೃತಬಳ್ಳಿ, ಆಶ್ವಗಂಧ, ಜೇನು ತುಪ್ಪ, ತುಪ್ಪ ಇತ್ಯಾದಿ ಜೀವನೀಯ ಅಷ್ಟವರ್ಗ ದ್ರವ್ಯಗಳನ್ನೊಳಗೊಂಡಿದ್ದು, ಆರೋಗ್ಯವಂತ ಮಾನವನ ಶರೀರದಲ್ಲಿ ಯಾವುದೇ ರೋಗ ಬಾರದಂತಹ ರೋಗನಿರೋಧಕ ಶಕ್ತಿಯನ್ನು ವೃದ್ದಿಸುವ ಔಷಧ ಎಂದು ಡಾ| ಮಣಿಕರ್ಣಿಕ ಅವರು ತಿಳಿಸಿದ್ದಾರೆ.