ಸುದ್ದಿ

ಸೋಮವಾರ -ದ.ಕ. ಜಿಲ್ಲೆಯಲ್ಲಿ 3 , ಉಡುಪಿಯಲ್ಲಿ 45 , ಕಾಸರಗೋಡಿನಲ್ಲಿ 8 ಕೊರೊನಾ ಪಾಸಿಟಿವ್…

ಮಂಗಳೂರು: ಇಂದು (ಸೋಮವಾರ) ದ.ಕ. ಜಿಲ್ಲೆಯಲ್ಲಿ 3 , ಉಡುಪಿಯಲ್ಲಿ 45 , ಕಾಸರಗೋಡಿನಲ್ಲಿ 8 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ.
ದ.ಕ. ಜಿಲ್ಲೆಯ 3 ಪ್ರಕರಣಗಳಲ್ಲಿ ಇಬ್ಬರು ಮಹಾರಾಷ್ಟ್ರದಿಂದ ಹಾಗೂ ಮತ್ತೊಬ್ಬರು ದುಬೈನಿಂದ ಬಂದವರಾಗಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಇಂದು ಸೋಂಕು ಪತ್ತೆಯಾದ ಎಲ್ಲರೂ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ ಇಂದು 8 ಮಂದಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಕೊರೋನಾ ಪಾಸಿಟಿವ್ ಆದವರಲ್ಲಿ ಮೂವರು ಕುವೈಟ್ ನಿಂದ, ಮೂವರು ಮಹಾರಾಷ್ಟ್ರದಿಂದ, ಇಬ್ಬರು ದುಬೈಯಿಂದ ಆಗಮಿಸಿದವರು.
ಇನ್ನು ರಾಜ್ಯದಲ್ಲಿ ಸೋಮವಾರ 308 ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 5760ಕ್ಕೆ ಏರಿಕೆಯಾಗಿದೆ. ಕಲಬುರಗಿಯಲ್ಲಿ 99, ಯಾದಗಿರಿಯಲ್ಲಿ 66, ಬೀದರ್ ನಲ್ಲಿ 48, ಉಡುಪಿಯಲ್ಲಿ 45, ಬೆಂಗಳೂರು ನಗರದಲ್ಲಿ 18, ಬಳ್ಳಾರಿಯಲ್ಲಿ 8, ಗದಗದಲ್ಲಿ 6, ಶಿವಮೊಗ್ಗ, ಧಾರವಾಡದಲ್ಲಿ ತಲಾ 4, ಹಾಸನ, ದಕ್ಷಿಣ ಕನ್ನಡದಲ್ಲಿ 3 , ಬಾಗಲಕೋಟೆಯಲ್ಲಿ 2, ಕೊಪ್ಪಳ, ರಾಮನಗರದಲ್ಲಿ ತಲಾ 1 ಪ್ರಕರಣಗಳು ವರದಿಯಾಗಿವೆ.

Advertisement

Related Articles

Leave a Reply

Your email address will not be published. Required fields are marked *

Back to top button