ಸುಳ್ಯ ನಗರಪಂಚಾಯತ್ – ಅಸಮರ್ಪಕ ಕಸ ವಿಲೇವಾರಿ ಬಗ್ಗೆ ಪ್ರತಿಭಟನೆ…
ಸುಳ್ಯ: ನಗರಪಂಚಾಯತ್ ವಠಾರದಲ್ಲಿ ಕಳೆದ 2 ವರ್ಷಗಳಿಂದ ಸಂಗ್ರಹಿಸಲಾದ ಕಸವನ್ನು ಸರಿಯಾಗಿ ವಿಲೇವಾರಿ ಮಾಡದಿರುವ ಬಗ್ಗೆ ವಿಶೇಷ ರೀತಿಯಲ್ಲಿ ಪ್ರತಿಭಟನೆ ಮಾಡಲಾಯಿತು.
ನಗರಪಂಚಾಯತ್ ವಠಾರದಲ್ಲಿ ಕಳೆದ 2 ವರ್ಷಗಳಿಂದ ಸಂಗ್ರಹಿಸಲಾದ ಕಸ ವಿಲೇವಾರಿ ಮಾಡದೇ ಕೊನೆಗೆ ಕಸ ಸ್ಥಳಾಂತರದ ಬದಲು ನಗರಪಂಚಾಯತ್ ಕೆಲಸ ಮಾಡುವ ಕೊಠಡಿಯನ್ನೇ ಸ್ಥಳಾಂತರಿಸಲಾಗಿದೆ. ಕೆಲವು ಸಿಬ್ಬಂದಿಗಳು ಅಲ್ಲೇ ಉಳಿದು ಕೆಲಸ ಮಾಡುತ್ತಿರುವುದರಿಂದ, ಅವರನ್ನು ಸೊಳ್ಳೆಯಿಂದು ರಕ್ಷಿಸುವ ಉದ್ದೆಶದಿಂದ ನಗರ ಪಂಚಾಯತ್ ನಲ್ಲಿ
ಓಡಾಮಾಸ್ ಹಚ್ಚಿ ಸಿಬ್ಬಂದಿಗಳಿಗೆ ಹಾಗು ಅಲ್ಲಿಗೆ ಬರುವ ಜನಸಾಮಾನ್ಯರಿಗೆ ಅರಿವು ಮೂಡಿಸುವ ಹೊಸ ರೀತಿಯ ಪ್ರತಿಭಟನೆ ಮಾಡಲಾಯಿತು. ಇದೇ ಪರಿಸ್ಥಿತಿ ಮುಂದುವರಿದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದೂ ಈ ಸಂದರ್ಭದಲ್ಲಿ ಎಚ್ಚರಿಸಲಾಯಿತು .
ನಗರ ಪಂಚಾಯತ್ ಸದಸ್ಯರಾದ ಎಂ.ವೆಂಕಪ್ಪ ಗೌಡ, ಬಾಲಕೃಷ್ಣ ಭಟ್ , ದೀರಕ್ರಾಸ್ತ ,ಉಮ್ಮರ್ ಹಾಗು ರಿಯಾಜ್ ಅಲ್ಲದೆ ಧರ್ಮಪಾಲ ಕೊಯಿಂಗಾಜೆ, ಸೈದ್ ಪರೆ , ಶಿಲ್ಪಾಇಬ್ರಾಹಿಂ ಮತ್ತಿತರರು ಹಾಜರಿದ್ದರು.