ಸುಳ್ಯ ಅಲ್ಪ ಸಂಖ್ಯಾತರ ದೊಡ್ಡ ಪ್ರಮಾಣದ ವಿವಿದೋದ್ಧೇಶ ಸಹಕಾರಿ ಸಂಘಕ್ಕೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಪ್ರಶಸ್ತಿ…

ಸುಳ್ಯ: ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿದೋದ್ಧೇಶ ಸಹಕಾರಿ ಸಂಘ ಇದರ 2022- 23ನೇ ಸಾಲಿನ ಸಮಗ್ರ ಕಾರ್ಯ ಚಟುವಟಿಕೆಗೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವತಿಯಿಂದ ನೀಡಲ್ಪಡುವ ಪ್ರಶಸ್ತಿ ಲಭಿಸಿದೆ.
ಆ. 19 ರಂದು ಮಂಗಳೂರಿನ ಜಿಲ್ಲಾ ಬ್ಯಾಂಕಿನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಅಲ್ಪಸಂಖ್ಯಾತರ ಸಹಕಾರಿ ಸಂಘದ ಅಧ್ಯಕ್ಷರಾದ ಮಹಮ್ಮದ್ ಇಕ್ಬಾಲ್ ಎಲಿಮಲೆ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಜ್ವಲ್ ರವರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ. ಎಂ. ಎನ್. ರಾಜೇಂದ್ರ ಕುಮಾರ್ ರವರಿಂದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷರು, ಹಾಲಿ ನಿರ್ದೇಶಕರಾದ ಸಂಶುದ್ದೀನ್ ಅರಂಬೂರು, ಮಾಜಿ ಉಪಾಧ್ಯಕ್ಷ, ಹಾಲಿ ನಿರ್ದೇಶಕರಾದ ಎ.ಕೆ . ಹಸೈನಾರ್ ಕಲ್ಲುಗುಂಡಿ ,ನಿರ್ದೇಶಕರಾದ ಜೂಲಿಯಾನ ಕ್ರಾಸ್ಥ, ಉಪಸ್ಥಿತರಿದ್ದರು.