ಅನಾರೋಗ್ಯದಿಂದ ಎಸ್ಎಸ್ ಎಲ್ ಸಿ ವಿದ್ಯಾರ್ಥಿ ಸಾವು…

ವಿಟ್ಲ : ಅನಾರೋಗ್ಯದಿಂದ ಎಸ್ಎಸ್ ಎಲ್ ಸಿ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ವಿಟ್ಲ ಪಡ್ನೂರು ಗ್ರಾಮ ಕೋಡಪದವು ಮಾಳ ಎಂಬಲ್ಲಿ ನಡೆದಿದೆ.
ಕೋಡಪದವು ಮಾಳ ನಿವಾಸಿ ನಾರಾಯಣ ಅವರ ಪುತ್ರ ಭುವನೇಶ್(16 ) ಮೃತಪಟ್ಟ ಬಾಲಕ. ಈತ ವಿಟ್ಲದ ವಿಠಲ ಪ್ರೌಢ ಶಾಲೆಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಯಾಗಿದ್ದಾನೆ.ಭುವನೇಶ್ ಸುಮಾರು 6 ತಿಂಗಳ ಹಿಂದಿನಿಂದ ಫಿಟ್ಸ್ ಖಾಯಿಲೆಯಿಂದ ಬಳಲುತ್ತಿದ್ದ ಎನ್ನಲಾಗಿದೆ.ಮನೆಯಲ್ಲಿ ಫಿಟ್ಸ್ ಬಂದು ಬಿದ್ದು ನರಳುತ್ತಿದ್ದು, ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ವೈದ್ಯರು ಪರೀಕ್ಷಿಸಿದಾಗ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sponsors

Related Articles

Leave a Reply

Your email address will not be published. Required fields are marked *

Back to top button