ಮಾಣಿ ಸಮೀಪ ಲಾರಿ ಪಲ್ಟಿ…

ಬಂಟ್ವಾಳ: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪದ ಪಲ್ಕೆ ಎಂಬಲ್ಲಿ ಡಾಂಬಾರು ಸಾಗಿಸುತ್ತಿದ್ದ ಲಾರಿ ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಸರಿದು ಪಲ್ಟಿಯಾಗಿದೆ.
ಚತುಷ್ಟಥ ಕಾಮಗಾರಿ ಹಿನ್ನೆಲೆಯಲ್ಲಿ ಅಗೆದು ಹಾಕಿರುವ ರಸ್ತೆ ಬದಿಯ ಹೊಂಡಕ್ಕೆ ಲಾರಿ ಬಿದ್ದು ಪಲ್ಟಿಯಾಗಿದೆ. ಘಟನೆಯಲ್ಲಿ ಲಾರಿ ಚಾಲಕ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾನೆ. ಘಟನಾ ಸ್ಥಳಕ್ಕೆ ವಿಟ್ಲ ಪೋಲಿಸರು ಭೇಟಿ ನೀಡಿದ್ಧಾರೆ.