ಭಾನುವಾರ-ದ.ಕ. ಜಿಲ್ಲೆಯಲ್ಲಿ ಕೊರೊನಾಗೆ ಮೂವರು ಬಲಿ…
ಮಂಗಳೂರು: ಬಂಟ್ವಾಳ ಮೂಲದ 57 ವರ್ಷದ ವೃದ್ದೆ ಹಾಗೂ ಸುರತ್ಕಲ್ನ ಇಡ್ಯಾ ನಿವಾಸಿ 31 ವರ್ಷದ ಯುವಕ ಹಾಗೂ ಸುರತ್ಕಲ್ ಗ್ರಾಮದ ಜೋಕಟ್ಟೆ ನಿವಾಸಿ 51 ವರ್ಷದ ಮಹಿಳೆ ಕೊರೊನಾ ಸೋಂಕಿನಿಂದಾಗಿ ಇಂದು ಸಾವಿಗೀಡಾಗಿದ್ದಾರೆ.
57 ವರ್ಷದ ಸೋಂಕು ದೃಢಪಟ್ಟಿದ್ದ ಮಹಿಳೆಯು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಯುವಕ ಸರ್ಕಾರಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 51 ವರ್ಷದ ಮೃತಪಟ್ಟ ಮಹಿಳೆ ಟಿ.ಬಿ ಕಾಯಿಲೆಯಿಂದ ಬಳಲುತ್ತಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜೂನ್ 26ರ ಸಂಜೆ ಸೋಂಕು ಪತ್ತೆಯಾಗಿತ್ತು.ದ.ಕ ಜಿಲ್ಲೆಯಲ್ಲಿ ಕೊರೊನ ಸೋಂಕಿನಿಂದಾಗಿ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.