ಶನಿವಾರ – ದ.ಕ 49 ,ಉಡುಪಿ 14 ಹಾಗೂ ರಾಜ್ಯದಲ್ಲಿ 918 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆ…

ಮಂಗಳೂರು: ಇಂದು(ಶನಿವಾರ) ದ.ಕ ಜಿಲ್ಲೆಯಲ್ಲಿ 49 ,ಉಡುಪಿ ಜಿಲ್ಲೆಯಲ್ಲಿ 14 ಹಾಗೂ ರಾಜ್ಯದಲ್ಲಿ 918 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.
ದ.ಕ ಜಿಲ್ಲೆಯಲ್ಲಿ 11ರ ಬಾಲಕ ಸೇರಿ ನಾಲ್ವರು ಸೌದಿಯಿಂದ ಮರಳಿದವರಲ್ಲಿ ಸೋಂಕು ದೃಢಪಟ್ಟಿದೆ.ರೋಗಿ ಸಂಖ್ಯೆ 10582 ಪ್ರಾಥಮಿಕ ಸಂಪರ್ಕದಿಂದ ಒಬ್ಬರಲ್ಲಿ ಪಾಸಿಟಿವ್ ಪತ್ತೆಯಾಗಿದೆ.ರೋಗಿ ಸಂಖ್ಯೆ 10581 ಸೋಂಕಿತನ ಸಂಪರ್ಕದಿಂದ 70 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ.ದುಬೈನಿಂದ ಮರಳಿದ ಇಬ್ಬರಲ್ಲಿ ಪಾಸಿಟಿವ್ ಪತ್ತೆಯಾಗಿದೆ.ಪುತ್ತೂರಿನ ನಿವಾಸಿ 40ರ ಮಹಿಳೆಯಲ್ಲಿ ಐಎಲ್ ಐ ಪ್ರಕರಣ ಕಂಡುಬಂದಿದೆ.ಪುತ್ತೂರಿನ ಮತ್ತೊಬ್ಬ 80 ವರ್ಷದ ಮಹಿಳೆಯಲ್ಲಿ ಸಾರಿ ಪ್ರಕರಣ ಕಂಡುಬಂದಿದೆ.ದುಬೈ, ಕತಾರ್ ನಿಂದ ಆಗಮಿಸಿದ ಐವರಲ್ಲಿ ಸೋಂಕು ಇದೆ ಎನ್ನುವುದು ಖಚಿತವಾಗಿದೆ.23 ವರ್ಷದ ಮಂಗಳೂರಿನ ವ್ಯಕ್ತಿಯಲ್ಲಿ ಪಾಸಿಟಿವ್ ಪತ್ತೆಯಾಗಿದ್ದು, ಮೂಲ ಪತ್ತೆ ಹಚ್ಚಲಾಗುತ್ತಿದೆ.ರೋಗಿ ಸಂಖ್ಯೆ 10275 ಸಂಪರ್ಕದಿಂದ 23 ವರ್ಷದ ಇಬ್ಬರು ಯುವಕರಲ್ಲಿ ಪಾಸಿಟಿವ್ ಕಂಡುಬಂದಿದೆ.ಮತ್ತೊಬ್ಬ ಕತಾರ್ ನಿಂದ ಮರಳಿದವರಲ್ಲಿ ಸೋಂಕು ದೃಢಪಟ್ಟಿದೆ.ರೋಗಿ ಸಂಖ್ಯೆ 9590ರ ಸಂಪರ್ಕದಿಂದ 24 ವರ್ಷದ ಯುವಕನಲ್ಲಿ ಪಾಸಿಟಿವ್ ಪತ್ತೆಯಾಗಿದೆ.34 ವರ್ಷದ ಬೆಳ್ತಂಗಡಿ ನಿವಾಸಿಯ ಮೂಲ ಪತ್ತೆಹಚ್ಚಲಾಗುತ್ತಿದೆ.ರೋಗಿ ಸಂಖ್ಯೆ 10588 ಸಂಪರ್ಕದಿಂದ ಒಬ್ಬರಲ್ಲಿ ಪಾಸಿಟಿವ್ ದೃಢಪಟ್ಟಿದೆ.ಮಂಗಳೂರು ನಿವಾಸಿ 22 ವರ್ಷದ ಯುವತಿಯಲ್ಲಿ ಐಎಲ್ ಐ ಪ್ರಕರಣ ಕಂಡುಬಂದಿದೆ.44 ವರ್ಷದ ಬಂಟ್ವಾಳ ನಿವಾಸಿಯ ಮೂಲ ಪತ್ತೆಯಾಗಿಲ್ಲ.19ರ ಯುವಕ ಪುತ್ತೂರು ನಿವಾಸಿಯಾಗಿದ್ದು ಆತನಲ್ಲಿ ಐಎಲ್ ಐ ಪ್ರಕರಣ ದೃಢಪಟ್ಟಿದೆ.
35 ವರ್ಷದ ಮಂಗಳೂರು ನಿವಾಸಿಯಲ್ಲಿ ಸಾರಿ ಪ್ರಕರಣ ಕಂಡುಬಂದಿದೆ.ಶಾರ್ಜಾದಿಂದ ಮರಳಿದ ಇಬ್ಬರಲ್ಲಿ ಪಾಸಿಟಿವ್ ಇರುವುದು ಪರೀಕ್ಷೆಯಿಂದ ತಿಳಿದುಬಂದಿದೆ.ಇನ್ನು ಮತ್ತಿಬ್ಬರ ಮೂಲ ತಿಳಿದುಬಂದಿಲ್ಲ.ಇನ್ನು ರೋಗಿ ಸಂಖ್ಯೆ 9590 ಸಂಪರ್ಕದಿಂದ ಬರೋಬ್ಬರಿ 13 ಮಂದಿಯಲ್ಲಿ ಪಾಸಿಟಿವ್ ಪತ್ತೆಯಾಗಿದೆ. ಈ ಪೈಕಿ 2 ವರ್ಷದ ಗಂಡು ಮಗು, 2 ವರ್ಷದ ಹೆಣ್ಣು ಮಗು ಸೇರಿಕೊಂಡಿದೆ 6ವರ್ಷದ ಬಾಲಕ ಸೇರಿದ್ದಾನೆ. ಇವರೆಲ್ಲರೂ ಸೋಂಕಿತನ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರು. ಅವರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು.ಉಳ್ಳಾಲ ವ್ಯಾಪ್ತಿಯಲ್ಲಿ ಪೊಲೀಸರು ಸೇರಿದಂತೆ 22 ಮಂದಿಯಲ್ಲಿ ಇಂದು ಸೋಂಕು ದೃಡವಾಗಿದೆ.
ಉಡುಪಿ ಜಿಲ್ಲೆಯಲ್ಲಿ ಪತ್ತೆಯಾದ ಪ್ರಕರಣಗಳ ಪೈಕಿ ಐವರು ಮಹಾರಾಷ್ಟ್ರದಿಂದ ಮರಳಿದವರಾಗಿದ್ದಾರೆ. ಒಬ್ಬರು ತೆಲಂಗಾಣದಿಂದ ಮರಳಿದವರಾಗಿದ್ದಾರೆ. ಉಳಿದಂತೆ ಆರು ಮಂದಿ ಉಡುಪಿ ನಿವಾಸಿಗಳಲ್ಲೇ ಸೋಂಕು ದೃಢಪಟ್ಟಿದೆ. ಬೆಂಗಳೂರು, ಕುಮಟಾದಿಂದ ಬಂದ ಇಬ್ಬರಲ್ಲಿ ಪಾಸಿಟಿವ್ ಪತ್ತೆಯಾಗಿದೆ.
ಇನ್ನು ರಾಜ್ಯದಲ್ಲಿ ಇಂದು 918 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಬೆಂಗಳೂರು ಒಂದರಲ್ಲೇ 596 ಪ್ರಕರಣಗಳು ದೃಢಪಟ್ಟಿವೆ.ಬೆಂಗಳೂರು ನಗರ -596, ದಕ್ಷಿಣ ಕನ್ನಡ -49, ಕಲಬುರಗಿ -33, ಬಳ್ಳಾರಿ -24, ಗದಗ -24, ಧಾರವಾಡ -19, ಬೀದರ್ -17,, ಉಡುಪಿ -14, ಹಾಸನ -14, ಕೋಲಾರ -14 ಯಾದಗಿರಿ, ಶಿವಮೊಗ್ಗ, ತುಮಕೂರು, ಚಾಮರಾಜನಗರ -13, ಮಂಡ್ಯ 12, ಮೈಸೂರು -12 , ಕೊಡಗು 9, ರಾಯಚೂರು ಮತ್ತು ದಾವಣಗೆರೆ 6, ಬೆಂಗಳೂರು ಗ್ರಾಮಾಂತರ 5 , ಉತ್ತರಕನ್ನಡ, ಬಾಗಲಕೋಟೆ, ಚಿಕ್ಕಮಗಳೂರು, ಚಿತ್ರದುರ್ಗ ತಲಾ 2 ಬೆಳಗಾವಿ , ಚಿಕ್ಕಬಳ್ಳಾಪುರ , ಕೊಪ್ಪಳ ಮತ್ತು , ಹಾವೇರಿ ತಲಾ 1 ಕೇಸ್ ಪತ್ತೆಯಾಗಿದೆ.

Sponsors

Related Articles

Leave a Reply

Your email address will not be published. Required fields are marked *

Back to top button