ಆದಿತ್ಯವಾರ – ದ.ಕ 196 ,ಉಡುಪಿ 41 ಹಾಗೂ ರಾಜ್ಯದಲ್ಲಿ 2627 ಕೊರೊನ ಪಾಸಿಟಿವ್ ಪತ್ತೆ…
ಮಂಗಳೂರು : ಇಂದು(ಆದಿತ್ಯವಾರ) ದ.ಕ. ಜಿಲ್ಲೆಯಲ್ಲಿ 196 ,ಉಡುಪಿ ಜಿಲ್ಲೆಯಲ್ಲಿ 41 ಹಾಗೂ ರಾಜ್ಯದಲ್ಲಿ ಕೊರೊನ ಪಾಸಿಟಿವ್ ಪತ್ತೆಯಾಗಿದೆ.
ದ.ಕ. ಜಿಲ್ಲೆಯ ಪಾಸಿಟಿವ್ ಪ್ರಕರಣಗಳ ಪೈಕಿ ಪ್ರಾಥಮಿಕ ಸಂಪರ್ಕದಿಂದ 20 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 91 ಮಂದಿಯಲ್ಲಿ ILI , 16 ಮಂದಿಯಲ್ಲಿ SARI ಪ್ರಕರಣ, 10 ಮಂದಿ ವಿದೇಶದಿಂದ ಆಗಮಿಸಿದವರಲ್ಲಿ ಸೋಂಕು ಪತ್ತೆಯಾಗಿದೆ. 57 ಪ್ರಕರಣಗಳ ಮೂಲ ಪತ್ತೆಹಚ್ಚಲಾಗುತ್ತಿದೆ. ಇಬ್ಬರಲ್ಲಿ ಪ್ರಿ ಡಿಲೆವರಿ ಸ್ಯಾಂಪಲ್ ಪಾಸಿಟಿವ್ ಪತ್ತೆಯಾಗಿದೆ.ಜಿಲ್ಲೆಯಲ್ಲಿ ಇಂದು ಐವರು ಕೊರೊನಾಗೆ ಬಲಿಯಾಗಿದ್ದಾರೆ. ಸಾವಿನ ಸಂಖ್ಯೆ 46 ಕ್ಕೆ ಏರಿಕೆಯಾಗಿದೆ.
ಉಡುಪಿ ಜಿಲ್ಲೆಯ ಪಾಸಿಟಿವ್ ಪ್ರಕರಣಗಳ ಪೈಕಿ ಮುಂಬೈಯಿಂದ 2, ಸೌದಿಯಿಂದ 1, ಅಂತರ್ ಜಿಲ್ಲೆಯ ಪ್ರಯಾಣ ಮಾಡಿದವರಲ್ಲಿ 632 ಮಂದಿಗೆ ಪಾಸಿಟಿವ್ ರೋಗಿಗಳ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿದೆ. ಇದರಲ್ಲಿ 26 ಪುರುಷರು, 11 ಮಹಿಳೆಯರು ಸೇರಿದಂತೆ 4 ಮಕ್ಕಳಿಗೆ ಕೊರೊನಾ ದೃಢಪಟ್ಟಿದೆ. 26 ಮಂದಿ ಉಡುಪಿ, 11 ಮಂದಿ ಕುಂದಾಪುರ ಹಾಗೂ 4 ಮಂದಿ ಕಾರ್ಕಳಕ್ಕೆ ಸೇರಿದವರಾಗಿದ್ದಾರೆ.