ಬಂಟ್ವಾಳ – ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಸಭಾದ ಕಾರ್ಯಕಾರಿ ಸಭೆ, ಬ್ರಾಹ್ಮಣ ಪ್ರತಿಷ್ಠಾನದ ಧರ್ಮದರ್ಶಿಗಳ ಪ್ರಥಮ ಸಭೆ…
ಬಂಟ್ವಾಳ: ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಸಭಾ ಬಂಟ್ವಾಳ ಇದರ ಕಾರ್ಯಕಾರಿ ಸಭೆ ಮತ್ತು ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಪ್ರತಿಷ್ಠಾನ ಬಂಟ್ವಾಳ ಇದರ ಧರ್ಮದರ್ಶಿಗಳ ಪ್ರಥಮ ಸಭೆಯು ಮೆಲ್ಕಾರ್ ನಲ್ಲಿರುವ ಆರ್ ಕೆ ಎಂಟರ್ ಪ್ರೈಸಸ್ ನಲ್ಲಿ ಜು.11 ರಂದು ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃಷ್ಣ ಶರ್ಮಾ ಅನಾರು ವಹಿಸಿದ್ದರು. ಉಪಾಧ್ಯಕ್ಷ ದೇವರಾವ್ ಬೊಕ್ಕಸ ಹಾಗೂ ಕಾರ್ಯದರ್ಶಿ ಸಂತೋಷ್ ಕುಮಾರ್ ಬಿಸಿ ರೋಡ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೋವಿಡೋತ್ತರ ಪ್ರಥಮ ಸಭೆಯನ್ನು ಸಾಮಾಜಿಕ ಅಂತರದೊಂದಿಗೆ ನಡೆಸಲಾಯಿತು. ಕೋವಿಡ್ ಮಹಾಮಾರಿಯು ಪ್ರಪಂಚವನ್ನು ಕಾಡುತ್ತಿರುವುದರಿಂದ ಸಮಾಜದ ಸುರಕ್ಷತೆಗಾಗಿ ಈ ವರ್ಷದ ಮಹಾಸಭೆಯನ್ನು ಮುಂದೂಡಿ, ಮುಂದಿನ ವರ್ಷ ನಡೆಸುವುದಾಗಿ ನಿರ್ಣಯಿಸಲಾಯಿತು.ವಿದ್ಯಾರ್ಥಿ ವೇತನ ನೀಡುವ ಬಗ್ಗೆ ಚರ್ಚೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.ಪರೀಕ್ಷಾ ಫಲಿತಾಂಶಗಳು ಬಂದ ಬಳಿಕ ವಲಯ ಪ್ರಮುಖರು ವಿದ್ಯಾರ್ಥಿವೇತನ ಬಯಸುವವರ ಅರ್ಜಿಯನ್ನು ಪಡೆದು ವಿದ್ಯಾರ್ಥಿವೇತನ ಸಮಿತಿಗೆ ಸಲ್ಲಿಸುವಂತೆ ನಿರ್ಣಯಿಸಲಾಯಿತು .
ಶ್ರೀ ಸುಬ್ರಮಣ್ಯ ಸಹಕಾರಿ ಸಂಘ(ಬ್ಯಾಂಕ್ ) ಮಂಗಳೂರು ಇದರ ಬಂಟ್ವಾಳ ಮತ್ತು ವಿಟ್ಲ ಶಾಖೆಗಳ ಸಲಹಾ ಸಮಿತಿಯ ಆಯ್ಕೆಯನ್ನು ಬ್ಯಾಂಕ್ ಅಧ್ಯಕ್ಷರ ಸಲಹೆಯ ಬಗ್ಗೆ, ಶೃಂಗೇರಿ ಜಗದ್ಗುರುಗಳ ಚಾತುರ್ಮಾಸ್ಯ ಪ್ರವಾಸದ ಬಗ್ಗೆ ಇನ್ನಿತರ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಿ ಸಲಹೆ ಸೂಚನೆಗಳನ್ನು ಪಡೆದು ನಿರ್ಣಯಿಸಲಾಯಿತು.ಬ್ಯಾಂಕ್ ನ ಪರವಾಗಿ ಆಡಳಿತ ನಿರ್ದೇಶಕ ನಾಗೇಶ ರಾವ್ ಸಲಹೆ ಸೂಚನೆಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ಸಂತೋಷ್ ಕುಮಾರ್ ಬಿಸಿರೋಡ್ ಪ್ರಾಸ್ತಾವಿಕವಾಗಿ ಮಾತನಾಡಿ ವಿಷಯವನ್ನು ಮಂಡಿಸಿದರು. ಖಜಾಂಚಿ ನಿತಿನ್ ಕುಮಾರ್ ಕಲ್ಲಡ್ಕ ಇವರು ಹಣಕಾಸಿನ ವರದಿಯನ್ನು ಮಂಡಿಸಿದರು.
ನಂತರ ನಡೆದ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಪ್ರತಿಷ್ಠಾನ ಬಂಟ್ವಾಳ ಇದರ ಪ್ರಥಮ ಸಭೆಯಲ್ಲಿ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಪ್ರತಿಷ್ಠಾನ ಬಂಟ್ವಾಳ ಇದರ ಗೌರವಾಧ್ಯಕ್ಷರಾದ ಕೃಷ್ಣಶರ್ಮ ಅನಾರು, ಅಧ್ಯಕ್ಷರಾದ ಭವಾನಿಶಂಕರ ರಾವ್ ಬಿಸಿರೋಡ್ ಸಹ ಕಾರ್ಯದರ್ಶಿಯವರಾದ ಸತೀಶ್ ರಾವ್ ಪೆರ್ನೆ, ಖಜಾಂಚಿ ಹರೀಶ್ ಕುಮಾರ್ ವಿ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಭೆಯಲ್ಲಿ ಪ್ರತಿಷ್ಠಾನಕ್ಕೆ ಸಂಬಂಧಪಟ್ಟ ಮುದ್ರೆಗಳು, ಲೋಗೋ ಮತ್ತು ಕಡತ ಸಂಬಂಧಿ ಪತ್ರಗಳ ಮುದ್ರಣಕ್ಕೆ ಹಾಗೂ ಬ್ಯಾಂಕ್ ವ್ಯವಹಾರಕ್ಕೆ ಸಂಬಂದಿಸಿದಂತೆ ಸಭೆಯ ಅನುವು ಪಡೆಯಲಾಯಿತು. ಸಭಾಕ್ಕೆ ಕಾವಳಕಟ್ಟೆಯಲ್ಲಿ ದಾನಿಗಳು ನೀಡಿದ್ದ ಜಾಗದ ಜವಾಬ್ದಾರಿಯನ್ನು ಪ್ರತಿಷ್ಠಾನಕ್ಕೆ ಸಭಾದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಕಾರ್ಯದರ್ಶಿಯವರ ಮೂಲಕ ಪ್ರತಿಷ್ಠಾನದ ಅಧ್ಯಕ್ಷರಿಗೆ ಹಸ್ತಾಂತರಿಸಲಾಯಿತು.ಪ್ರತಿಷ್ಠಾನವು ಮುಂದೆ ಕಟ್ಟಡ ನಿರ್ಮಾಣಕ್ಕೆ ಬೇಕಾದ ಯೋಜನೆಯನ್ನು ರೂಪುರೇಷೆಯನ್ನು ಹಾಕುವ ಬಗ್ಗೆ ಮತ್ತು ಉಪ ಸಮಿತಿಗಳನ್ನು ರಚಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಮುಂದೆ ಸಭಾ ಮತ್ತು ಪ್ರತಿಷ್ಠಾನ ಸಭೆ ಸೇರುವುದರ ಬಗ್ಗೆ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರ ಬಗ್ಗೆ ಚರ್ಚಿಸಲಾಯಿತು.ನಿತಿನ್ ಕುಮಾರ್ ಕಲ್ಲಡ್ಕ ಅವರು ವಂದಿಸಿದರು.