ಮತ್ತೆ ಚೀನಾದ 47 ಆ್ಯಪ್ ನಿಷೇಧ…
ನವದೆಹಲಿ:ಭಾರತ ಈ ಹಿಂದೆ ನಿಷೇಧಿಸಿದ 59 ಆ್ಯಪ್ ಗಳ ತದ್ರೂಪುಗಳಂತೆ ಕಾರ್ಯನಿರ್ವಹಿಸುತ್ತಿದ್ದ 47 ಆ್ಯಪ್ ಗಳನ್ನು ಭಾರತ ಸರ್ಕಾರ ನಿಷೇಧಿಸಿದೆ.
ಭಾರತ ಸರ್ಕಾರ ತನ್ನ ನಿಷೇಧದ ಆದೇಶಗಳನ್ನು ಪಾಲಿಸುವಂತೆ 59 ಆ್ಯಪ್ ಗಳ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ ಬೆನ್ನಲ್ಲೇ ಹೊಸದಾಗಿ ಆ್ಯಪ್ ಗಳನ್ನು ನಿಷೇಧಿಸಲಾಗಿದೆ. ಈ ಹಿಂದೆ ಬ್ಯಾನ್ ಮಾಡಲಾಗಿದ್ದ ಆ್ಯಪ್ ಕಂಪನಿಗಳಿಗೆ ಪತ್ರ ಬರೆದಿದ್ದ ಮಾಹಿತಿ ತಂತ್ರಜ್ಞಾನ ಸಚಿವಾಲಯ, ನಿಷೇಧದ ಹೊರತಾಗಿಯೂ ಆ್ಯಪ್ ಗಳು ನೇರ ಅಥವಾ ಪರೋಕ್ಷವಾಗಿ ಲಭ್ಯವಿದ್ದು ಕಾರ್ಯನಿರ್ವಹಣೆ ಮಾಡುತ್ತಿವೆ. ಆದೇಶವನ್ನು ಪಾಲಿಸದೇ ಇದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿತ್ತು.