ಸುಳ್ಯ- ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ ಪತ್ರಿಕಾ ದಿನಾಚರಣೆ…

ಸುಳ್ಯ: ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಘಟಕದ ವತಿಯಿಂದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವು ಸುಳ್ಯದ ಪರಿವಾರಕಾನದ ಉಡುಪಿ ಗ್ರ್ಯಾಂಡ್ ಪರಿವಾರ್ ಸಭಾಂಗಣದಲ್ಲಿ ಇಂದು (ಜು.28) ಆಚರಿಸಲಾಯಿತು.
ಕಾರ್ಯಕ್ರಮವನ್ನು ತಹಶಿಲ್ದಾರ್ ಅನಂತಶಂಕರ್ ಅವರು ಉದ್ಘಾಟಿಸಿ, ಶುಭಹಾರೈಸಿದರು. ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ತಾರನಾಥ ಗಟ್ಟಿ ಕಾಪಿಕಾಡ್ ಉಪನ್ಯಾಸಕರಾಗಿ ಮಾತನಾಡಿ ಇಂದು ಮಾಧ್ಯಮ ವ್ಯವಸ್ಥೆಯನ್ನು ಅನುಮಾನ ಪಡುವಂತಹ ದೃಷ್ಟಿಯಲ್ಲಿ ಜನಸಾಮಾನ್ಯರು ನೋಡುವಂತಾಗಿದೆ. ಮಾಧ್ಯಮಗಳು ವಿಶ್ವಾಸವನ್ನು ಕಳೆದುಕೊಳ್ಳುತ್ತಿದೆ. ಗ್ರಾಮಾಂತರದ ಪತ್ರಿಕೆಗಳಲ್ಲಿ ಉತ್ತಮ ಕೆಲಸ ಕಾರ್ಯಗಳು ನಡೆಯುತ್ತಿದೆ ಎಂದರು.
ಅತಿಥಿಗಳಾಗಿದ್ದ ಸುಳ್ಯ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ, ತಾ.ಪಂ CEO ಭವಾನಿ ಶಂಕರ್, ಸುಳ್ಯ‌‌ ಪ್ರೆಸ್ ಕ್ಲಬ್ ಅಧ್ಯಕ್ಷ ಜೆ.ಕೆ‌ ರೈ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಮಂಗಳೂರಿನ ಹಿರಿಯ ಪತ್ರಕರ್ತ ರಿಚರ್ಡ್‌ ಲಸ್ರಾದೋ, ಹಿರಿಯ ಪತ್ರಿಕಾ ಪ್ರತಿನಿಧಿ ಸಂಕಪ್ಪ ಸಾಲ್ಯಾನ್ ಅಲೆಕ್ಕಾಡಿ, ಹಿರಿಯ ಪತ್ರಿಕಾ ವಿತರಕ ತೇರಪ್ಪ ಮಣಿಯಾಣಿ ಪೆರುವಾಜೆ ಇವರನ್ನು ಸನ್ಮಾನಿಸಲಾಯಿತು.
ಸುಳ್ಯ ತಾಲೂಕು ಯೂನಿಯನ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ ಅವರು ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮಕ್ಕೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ನಿಯೋಜಿತ‌ ಕಾರ್ಯದರ್ಶಿ ಯಶ್ವಿತ್ ಕಾಳಮನೆ‌ ಸ್ವಾಗತಿಸಿದರು. ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಬಂಟ್ವಾಳ್‌ ಅಭಿನಂದನಾ ಭಾಷಣ ಮಾಡಿದರು. ಸಮಿತಿಯ ಕೋಶಾಧಿಕಾರಿ ಉಮೇಶ್ ಮಣಿಕ್ಕಾರ ವಂದಿಸಿದರು. ಕಾರ್ಯದರ್ಶಿ ರಮೇಶ್ ನೀರಬಿದಿರೆ,ಪೂಜಾಶ್ರೀ ಪೈಚಾರ್ ಕಾರ್ಯಕ್ರಮ ನಿರೂಪಿಸಿದರು.

IMG 20200728 WA0023 300x146

IMG 20200728 113239 300x225

IMG 20200728 WA0007 1024x573 2 300x168

Related Articles

Leave a Reply

Your email address will not be published. Required fields are marked *