ಮಂಗಳವಾರ – ದ.ಕ 173 ,ಉಡುಪಿ 109 ಹಾಗೂ ರಾಜ್ಯದಲ್ಲಿ 5536 ಕೊರೊನ ಪಾಸಿಟಿವ್ ಪತ್ತೆ…

ಮಂಗಳೂರು: ಇಂದು(ಮಂಗಳವಾರ) ದ.ಕ ಜಿಲ್ಲೆಯಲ್ಲಿ 173 ,ಉಡುಪಿ ಜಿಲ್ಲೆಯಲ್ಲಿ 109 ಹಾಗೂ ರಾಜ್ಯದಲ್ಲಿ 5536 ಕೊರೊನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.
ದ.ಕ ಜಿಲ್ಲೆಯಲ್ಲಿ ಇಂದು 173 ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.ಇದರಲ್ಲಿ 21 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ, 91 ILI ಪ್ರಕರಣಗಳು ಹಾಗೂ 22 SARI ಪ್ರಕರಣಗಳಾಗಿವೆ. 38 ಮಂದಿಯ ಸೋಂಕಿನ ಮೂಲ ಪತ್ತೆಯಾಗಿಲ್ಲ. ಜಿಲ್ಲೆಯಲ್ಲಿ ಇಂದು ಕೊರೊನ ಕ್ಕೆ 4 ಮಂದಿ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 5103ಕ್ಕೆ ಏರಿಕೆಯಾಗಿದೆ. ಸದ್ಯ 2632 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 2338 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ
ಉಡುಪಿ ಜಿಲ್ಲೆಯಲ್ಲಿ ಇಂದು 109 ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಆ ಮೂಲಕ ಸೋಂಕಿತರ ಸಂಖ್ಯೆ 3722 ಕ್ಕೆ ಏರಿಕೆಯಾಗಿದೆ.ಒಟ್ಟು 2239 ಮಂದಿ ಜಿಲ್ಲೆಯಲ್ಲಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
ಇಂದು ರಾಜ್ಯದಲ್ಲಿ ಸೋಮವಾರ ರಾಜ್ಯದಲ್ಲಿ ಒಟ್ಟು 5536 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಇದರಿಂದ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,07001ಕ್ಕೆ ಏರಿಕೆಯಾಗಿದೆ. ಇಂದು ರಾಜಧಾನಿ ಬೆಂಗಳೂರು ನಗರದಲ್ಲಿ 1898 ಪ್ರಕರಣಗಳು ಪತ್ತೆಯಾಗಿದ್ದು, 40 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಮಹಾಮಾರಿಗೆ ಇಂದು 102 ಮಂದಿ ಬಲಿಯಾಗಿದ್ಧಾರೆ. ಕಳೆದ 24 ಗಂಟೆಗಳಲ್ಲಿ 2,819 ಮಂದಿ ಸಂಪೂರ್ಣ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಒಟ್ಟು 40,504 ಮಂದಿ ಚೇತರಿಸಿಕೊಂಡಂತಾಗಿದೆ. ಸದ್ಯ ರಾಜ್ಯದಲ್ಲಿ ಒಟ್ಟು 64,434 ಸಕ್ರಿಯ ಪ್ರಕರಣಗಳಿವೆ.

IMG 20200728 WA0042 215x300

Related Articles

Leave a Reply

Your email address will not be published. Required fields are marked *