ಸುಳ್ಯ – ಬಿಜೆಪಿ ಮಂಡಲ ಅಧ್ಯಕ್ಷ ಸ್ಥಾನದಿಂದ ಹರೀಶ್ ಕಂಜಿಪಿಲಿ ಅವರನ್ನು ಕೆಳಗಿಳಿಸುವಂತೆ ಕಾಂಗ್ರೆಸ್ ಆಗ್ರಹ…
ಸುಳ್ಯ: ಸರಸ್ವತಿ ಕಾಮತ್ ಅವರ ಮೇಲೆ ಆದ ದೈಹಿಕ ಹಲ್ಲೆಯ ಕುರಿತು ನ್ಯಾಯಾಲಯದಲ್ಲಿ ನ್ಯಾಯ ಸಿಕ್ಕಿದ್ದು ಸಂತಸ
ತಂದಿದೆ. ಅಂದಿನ ಪೊಲೀಸ್ ಅಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಹಾಗೆಯೇ ಈಗಿನ ಪೊಲೀಸ್ ಅಧಿಕಾರಿಗಳು ಅಪರಾಧಿಗಳು ರಾಜಾರೋಷವಾಗಿ ಓಡಾಡದಂತೆ ಜಾಗೃತಿವಹಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ ಸಿ ಜಯರಾಮ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಕಾಂಗ್ರೆಸ್ ಹಿರಿಯ ಮುಖಂಡ ಭರತ್ ಮುಂಡೋಡಿ ಮಾತನಾಡಿ ಹರೀಶ್ ಕಂಜಿಪಿಲಿ ಅವರನ್ನು ಬಿಜೆಪಿ ಮಂಡಲ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಿ. ಇಲ್ಲವೇ ಹರೀಶ್ ಕಂಜಿಪಿಲಿ ಅವರೇ ನೈತಿಕ ಹೊಣೆ ಹೊತ್ತು, ಈ ತೀರ್ಪನ್ನು ಗೌರವಿಸಿ ತಮ್ಮ ಸ್ಥಾನದಿಂದ ಕೆಳಗಿಳಿಯಲಿ ಎಂದರಲ್ಲದೆ ಮೇಲ್ಮನವಿ ಸಲ್ಲಿಸುವಾಗಲೂ ಕಾಂಗ್ರೆಸ್ ಸರಸ್ವತಿ ಅವರ ಜೊತೆ ನಿಲ್ಲಲಿದೆ ಎಂದರು. ಸರಸ್ವತಿ ಕಾಮತ್ ಮಾತನಾಡಿ ಹೆಣ್ಣು ಮಕ್ಕಳಿಗೆ ನ್ಯಾಯ ದೊರಕಿದ್ದು ಖುಷಿ ಇದೆ. ಯಾರು ಕೂಡ ಇಂತಹ ಕೃತ್ಯವನ್ನು ಮಾಡಬಾರದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಜಯಪ್ರಕಾಶ್ ರೈ, ಚಂದ್ರಶೇಖರ ಕಾಮತ್ , ಎ.ಕೆ ಇಬ್ರಾಹಿಂ, ಧರ್ಮಪಾಲ ಕೊಯಿಂಗಾಜೆ, ಸಂಶುದ್ದೀನ್ , ಸುರೇಶ್ ಅಮೈ, ವೆಂಕಪ್ಪ ಗೌಡ ನಾರ್ಕೋಡು, ಕೆ.ಎಂ.ಮುಸ್ತಫಾ, ಅನಿಲ್ ರೈ ಬೆಳ್ಳಾರೆ, ಶಾಫಿ ಕುತ್ತಮೊಟ್ಟೆ, ರಾಜೀವಿ ರೈ ಬೆಳ್ಳಾರೆ, ಸೋಮಶೇಖರ ಕೊಯಿಂಗಾಜೆ, ಶಕುಂತಲಾ ಬೆಳ್ಳಾರೆ, ಶಾಹುಲ್ ಹಮೀದ್, ಆನಂದ ಬಳ್ಳಾರೆ, ವಿಠಲ್ ದಾಸ್ ಬೆಳ್ಳಾರೆ ಮತ್ತಿತರರು ಉಪಸ್ಥಿತರಿದ್ದರು.