ಸಂಪಾಜೆ – ಗೂನಡ್ಕ ಕ್ಕೆ ಮಾಜಿ ಸಚಿವ ರಮಾನಾಥ ರೈ ಭೇಟಿ…
ಸಂಪಾಜೆ : ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ಬಿ.ರಮಾನಾಥ ರೈಯವರು ಸಂಪಾಜೆ ಗ್ರಾಮದ ಗೂನಡ್ಕದಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕುಂಞ ಗೂನಡ್ಕರವರ ಕಚೇರಿಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಂಪಾಜೆ ಗ್ರಾಮವು ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಹಿಡಿತದಲ್ಲಿದೆ.ಇದಕ್ಕೆ ಕಾರಣ ಇಲ್ಲಿನ ಕಾಂಗ್ರೆಸ್ ನಾಯಕರು ಮಾಡಿದ ಅಭಿವೃದ್ಧಿ ಕೆಲಸಗಳು.ಮುಂದೆಯೂ ಕೂಡ ಕಾಂಗ್ರೆಸ್ ಪಕ್ಷವೇ ಇಲ್ಲಿ ಬಲಿಷ್ಠವಾಗಿರುತ್ತದೆ ಎಂದರು.
ಈ ವೇಳೆ ಮಹಮ್ಮದ್ ಕುಂಞ ಗೂನಡ್ಕರವರು ಗೂನಡ್ಕದ ಬೈಲೆ ರಸ್ತೆಯ ಸಮೀಪ ಮತ್ತು ಕಡೆಪಾಲದ ಕೊಚ್ಚಿ ಎಂಬಲ್ಲಿ 13 ಬಡ ಕುಟುಂಬಗಳು ವಾಸ್ತವ್ಯವಿದ್ದು 94 ಸಿ ಯಲ್ಲಿ ಅರ್ಜಿ ಹಾಕಿದರೂ ಹಕ್ಕು ಪತ್ರ ಸಿಗಲು ಅರಣ್ಯ ಇಲಾಖೆಯಿಂದ ಕೆಲವು ಅಡೆತಡೆಗಳು ಇದ್ದು, ಡಿ.ಎಫ್.ಒ.ರವರಿಗೆ ಈ ಬಗ್ಗೆ ಮಾತನಾಡಬೇಕೆಂದು ಮನವಿಯನ್ನು ಮಾಡಿದರು.ಮನವಿಗೆ ಸ್ಪಂದಿಸಿದ ರಮಾನಾಥ ರೈಯವರು ಮಂಗಳೂರು ಡಿ.ಎಫ್.ಒ.ರವರಿಗೆ ಕರೆ ಮಾಡಿ ವಿಷಯವನ್ನು ತಿಳಿಸಿ ಸಮಸ್ಯೆಯನ್ನು ಇತ್ಯರ್ಥಪಡಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಕಾವು ಹೇಮನಾಥ ಶೆಟ್ಟಿ, ಕೆ.ಪಿ.ಸಿ.ಸಿ.ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ, ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜಿ.ಕೆ.ಹಮೀದ್, ದ.ಕ.ಜಿಲ್ಲಾ ಎನ್.ಎಸ್.ಯು.ಐ. ಉಪಾಧ್ಯಕ್ಷರಾದ ಶೌವಾದ್ ಗೂನಡ್ಕ ಸೇರಿದಂತೆ ಇನ್ನೀತರರು ಉಪಸ್ಥಿತರಿದ್ದರು.
ಮಹಮ್ಮದ್ ಕುಂಞ ಗೂನಡ್ಕರವರು ಸ್ವಾಗತಿಸಿದರು, ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪಿ.ಕೆ.ಅಬೂಸಾಲಿಯವರು ಧನ್ಯವಾದವನ್ನು ಸಲ್ಲಿಸಿದರು.