ದೇಶವಿರೋಧಿ ಹಾಗೂ ಆತಂಕಕಾರಿ ಗೋಡೆ ಬರಹಗಳು, ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಸರ್ಕಾರ ವಿಫಲ — ಶೌವಾದ್ ಗೂನಡ್ಕ…
ಮಂಗಳೂರು: ನಗರದಲ್ಲಿ ಕಿಡಿಗೇಡಿಗಳು ದೇಶವಿರೋಧಿ ಹಾಗೂ ಆತಂಕಕಾರಿ ಗೋಡೆ ಬರಹಗಳ ಮೂಲಕ ಜಿಲ್ಲೆಯ ಶಾಂತಿ ಕದಡಲು ಯತ್ನಿಸುತ್ತಿದ್ದು, ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ವಿಳಂಬವಾಗುತ್ತಿರುವುದು ಸರ್ಕಾರದ ವೈಫಲ್ಯತೆಗೆ ಹಿಡಿದ ಕೈಗನ್ನಡಿಯೆಂದು ಕೆ.ಪಿ.ಸಿ.ಸಿ ಮಾಧ್ಯಮ ವಕ್ತಾರ ಶೌವಾದ್ ಗೂನಡ್ಕ ಹೇಳಿದ್ದಾರೆ.
ಮೊದಲ ಗೋಡೆ ಬರಹವು ಪತ್ತೆಗೊಂಡು ಹಲವು ದಿವಸಗಳು ಕಳೆದು ಹೋಗಿವೆ. ನಂತರ ಪಿ.ವಿ.ಎಸ್ ಬಳಿ ವಿವಾದಾತ್ಮಕ ಗೋಡೆ ಬರಹ ಕಾಣಿಸಿಕೊಂಡಿದೆ. ಇದು ದ.ಕ.ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದ್ದು, ಆರೋಪಿಗಳು ಯಾರೇ ಆಗಿರಲಿ ಶೀಘ್ರವೇ ಅವರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಅವರು ಆಗ್ರಹಿಸಿದ್ದಾರೆ. ರಾಜ್ಯ ಹಾಗೂ ಕೇಂದ್ರದಲ್ಲಿ ಬಿ.ಜೆ.ಪಿ.ಸರ್ಕಾರ ಆಡಳಿತದಲ್ಲಿದೆ, ದ.ಕ.ಜಿಲ್ಲೆಯಲ್ಲಿ 7 ಬಿ.ಜೆ.ಪಿ.ಶಾಸಕರಿದ್ದಾರೆ, ಬಿ.ಜೆ.ಪಿ.ರಾಜ್ಯಾಧ್ಯಕ್ಷರು ನಮ್ಮ ಜಿಲ್ಲೆಯ ಸಂಸದರೇ ಆಗಿದ್ದಾರೆ ಆದರೆ ಅವರೆಲ್ಲರೂ ಕೇವಲ ಹೇಳಿಕೆಗಳ ಮೂಲಕ ಕಾಲಹರಣ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರವು ನಿಗಮ ಸ್ಥಾಪನೆ ಮಾಡುವುದರಲ್ಲಿ ಹಾಗೂ ಸಚಿವ ಸಂಪುಟ ರಚನೆ ಮಾಡುವುದರಲ್ಲಿ ಕಾರ್ಯನಿರತವಾಗಿದೆ ಅವರಿಗೆ ಜನರು ನೆಮ್ಮದಿಯಿಂದ ಬದುಕುವುದು ಇಷ್ಟವಿಲ್ಲವೆಂದು ಶೌವಾದ್ ಗೂನಡ್ಕರವರು ತಿಳಿಸಿದ್ದಾರೆ.