ಅರಂತೋಡು – ಎಸ್ ಕೆ ಎಸ್ಎಸ್ಎಫ್ ಶಾಖೆಯ ವತಿಯಿಂದ ಸ್ಥ‍ಾಪನಾ ದಿನಾಚರಣೆ…

ಸುಳ್ಯ: ಅರಂತೋಡು ಎಸ್ ಕೆ ಎಸ್ಎಸ್ಎಫ್ ಶಾಖೆಯ ವತಿಯಿಂದ ಎಸ್ ಕೆ ಎಸ್ಎಸ್ಎಫ್ ಸ್ಥಾಪನಾ ದಿನದ ಪ್ರಯುಕ್ತ ಧ್ವಜರೋಹಣ ಕಾರ್ಯಕ್ರಮ ಅರಂತೋಡು ಮಸೀದಿ ವಠಾರದಲ್ಲಿ ಫೆ.19ರಂದು ನಡೆಯಿತು.
ಅಧ್ಯಕ್ಷತೆಯನ್ನು ಅರಂತೋಡು ಶಾಖೆಯ ಅಧ್ಯಕ್ಷ ತಾಜುದ್ದೀನ್ ವಹಿಸಿದರು.ಅರಂತೋಡು ಬದ್ರಿಯಾ ಮಸೀದಿ ಖತೀಬರಾದ ಬಹು ಅಲ್ ಹಾಜ್ ಇಸಾಖ್ ಬಾಖವಿ ದುವಾ ನೆರವೇರಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರಂತೋಡು ಮಸೀದಿಯ ಅಡಳಿತ ಮಂಡಳಿ ಅಧ್ಯಕ್ಷ ಹಾಜಿ ಅಶ್ರಫ್ ಗುಂಡಿ ಧ್ವಜರೋಹಣಗೈದು ಶುಭ ಹಾರೈಸಿದರು. ಸಮಾರಂಭದಲ್ಲಿ ಅರಂತೋಡು ಜಮಾ ಅತ್ ಕಾರ್ಯದರ್ಶಿ ಕೆ.ಎಮ್.ಮೂಸಾನ್,ಸಾಜಿದ್ ಅಝ್ಹರಿ ಪೇರಡ್ಕ,ಸ್ವಲಾತ್ ಸಮಿತಿ ಉಪಾಧ್ಯಕ್ಷ ಕೆ.ಎಮ್.ಅಬೂಬಕ್ಕರ್ ಪಾರೆಕ್ಕಲ್,ನುಸ್ರತುಲ್ ಇಸ್ಲಾಂ ಮದರಸ ಮ್ಯಾನೇಜ್‌ಮೆಂಟ್ ಸಂಚಾಲಕ ಅಮೀರ್ ಕುಕ್ಕುಂಬಳ,ಜಮಾ ಅತ್ ಮಾಜಿ ಅಧ್ಯಕ್ಷ ಹಾಜಿ ಕೆ.ಎಮ್.ಮಹಮ್ಮದ್ ,ಅನ್ವಾರುಲ್ ಹುದಾ ಯಂಗ್ ಮೆನ್ಸ್ ಮಾಜಿ ಅಧ್ಯಕ್ಷ ಹನೀಫ್,ಸಂಸುದ್ದೀನ್ ಪೆಲ್ತಡ್ಕ,ಮುಸ್ತಫಾ ಎ.ಎ, ಅರಂತೋಡು ಶಾಖೆಯ ಮಾಜಿ ಅಧ್ಯಕ್ಷ ಅಶೀಕ್ ಕುಕ್ಕುಂಬಳ,ಸದಸ್ಯ ಮುಝಮ್ಮಿಲ್,ಬಾತಿಶಾ ಮುಂತಾದವರು ಉಪಸ್ಥಿತರಿದ್ದರು .ಅರಂತೋಡು ಶಾಖೆಯ ಕಾರ್ಯದರ್ಶಿ ಜುಬೈರ್ ಸ್ವಾಗತಿಸಿ ವಂದಿಸಿದರು.

E338cf70 F574 47f4 9250 A38b137f5d9f 300x141

3a0b3a7c 2466 4274 Bb0c 578e3ff5e475 141x300

Related Articles

Leave a Reply

Your email address will not be published. Required fields are marked *