ಯೆನೆಪೋಯ ಇಂಜಿನಿಯರಿಂಗ್ ಕಾಲೇಜು – ತಾಂತ್ರಿಕ ಉಪನ್ಯಾಸ…
ಮೂಡಬಿದಿರೆ : ಇಲ್ಲಿನ ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುತ್ ಮತ್ತು ವಿದ್ಯುನ್ಮಾನ ವಿಭಾಗದ ವತಿಯಿಂದ ” Opporunities and Challenges in Embedded Systems ” ಎಂಬ ವಿಷಯದ ಕುರಿತಾದ ತಾಂತ್ರಿಕ ಉಪನ್ಯಾಸವನ್ನು ಫೆ. 22 ರಂದು ಏರ್ಪಡಿಸಲಾಗಿತ್ತು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಆರ್. ಜಿ. ಡಿಸೋಜ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಕ್ಲೋನ್ಯೆಕ್ ಆಟೋಮೇಷನ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯ ತಾಂತ್ರಿಕ ಸಲಹೆಗಾರರಾದ ರಾಘವೇಂದ್ರ ಪ್ರಭು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ರಾಘವೇಂದ್ರ ಪ್ರಭು ಎಂಬೆಡೆಡ್ ಸಿಸ್ಟಮ್ಸ್ ಕ್ಷೇತ್ರದಲ್ಲಿ ಇರುವ ಉದ್ಯೋಗಾವಕಾಶಗಳ ಬಗ್ಗೆ ಮತ್ತು ಉದ್ಯೋಗ ಪಡೆಯಲು ಬೇಕಾದ ಅರ್ಹತೆಗಳ ಬಗ್ಗೆ ವಿವರಿಸಿದರು. ಎರಡನೇ ವರ್ಷದ ವಿದ್ಯಾರ್ಥಿಗಳು ಉಪನ್ಯಾಸದ ಪ್ರಯೋಜನ ಪಡೆದರು. ವಿಭಾಗ ಮುಖ್ಯಸ್ಥ ಪ್ರೊ. ಪ್ರಸನ್ನ ಕುಮಾರ್ ಉಪಸ್ಥಿತರಿದ್ದರು. ಪ್ರಾಧ್ಯಾಪಕರುಗಳಾದ ಪ್ರೊ. ಪ್ರವೀಣ್ ಜಿ.ಬಿ . ಮತ್ತು ಪ್ರೊ. ಶಂಕರ್ ಪೈ ಕಾರ್ಯಕ್ರಮವನ್ನು ಸಂಯೋಜಿಸಿದ್ದರು. ವಿದ್ಯಾರ್ಥಿ ಯುವರಾಜ್ ಸಂಪನ್ಮೂಲ ವ್ಯಕ್ತಿಯನ್ನು ಸಭೆಗೆ ಪರಿಚಯಿಸಿ, ಕಾರ್ಯಕ್ರಮದ ಕೊನೆಯಲ್ಲಿ ವಂದಿಸಿದರು.