ಯೆನೆಪೋಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಾತೃಭಾಷ ದಿವಸ ಆಚರಣೆ…
ಮೂಡಬಿದಿರೆ : ಬಹುಭಾಷಾ ಮತ್ತು ಬಹುಸಂಸ್ಕೃತಿಯನ್ನು ಪ್ರತಿಬಿಂಬಿಸಲು ಮತ್ತು ಪ್ರೋತ್ಸಾಹಿಸಿ ಉಳಿಸಲು ಪೆಬ್ರವರಿ 21 ನ್ನು ಪ್ರಪಂಚಾದ್ಯಂತ ವಿಶ್ವ ಮಾತೃಭಾಷ ದಿವಸವಾಗಿ ಆಚರಿಸಲಾಗುತ್ತದೆ. ಈ ನಿಟ್ಟಿನಲ್ಲಿ ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ “ಮಾತೃಭಾಷ ದಿವಸ “ವನ್ನು ಫೆ. 23ರಂದು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಆರ್. ಜಿ. ಡಿ ‘ಸೋಜ ಭಾಗವಹಿಸಿದ್ದರು. ನಮಗೆ ಅರಿವಾಗುವ ಯಾವುದೇ ಭಾಷೆಯಲ್ಲಿ ಸಂವಹನ ಮಾಡಿದಾಗ ಕೇವಲ ಅರ್ಥ ಆಗುತ್ತದೆ. ಅದೇ ಮಾತೃಭಾಷೆಯಲ್ಲಿ ಸಂವಹನ ಮಾಡಿದಾಗ ಹೃದಯಕ್ಕೆ ಮುಟ್ಟುತ್ತದೆ ಎಂದು ಅವರು ಮಾತೃಭಾಷೆಯ ಮಹತ್ವವನ್ನು ಅರ್ಥಪೂರ್ಣವಾಗಿ ವಿವರಿಸಿದರು. ಮಾತೃಭಾಷ ದಿವಸದ ಅಂಗವಾಗಿ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಡುಗರಿಕೆ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಹತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಥಮ ಬಹುಮಾನವನ್ನು ಕು. ಶ್ರೀರಕ್ಷಾ ಮತ್ತು ದ್ವಿತೀಯ ಬಹುಮಾನವನ್ನು ಕು. ಸುಶೃತ ಪಡೆದುಕೊಂಡರು.
ಕಾರ್ಯಕ್ರಮದ ವೇದಿಕೆಯಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಕ್ರಮಾಧಿಕಾರಿ ಪ್ರೊ. ಶ್ರೀನಿವಾಸ್ ಮತ್ತು ಕ್ಯಾಂಪಸ್ ಆಡಳಿತಧಿಕಾರಿ ಮೊಹಮ್ಮದ್ ಶಾಹಿದ್ ಉಪಸ್ಥಿತರಿದ್ದರು. ಎಲ್ಲ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ದ್ವಿತೀಯ ವರ್ಷದ ವಿದ್ಯಾರ್ಥಿ ಮೊಹಮ್ಮದ್ ಮುಹಜ್ ನಿರೂಪಿಸಿದರು.