ಉದುಮ- ಯು ಡಿ ಎಫ್ ಅಭ್ಯರ್ಥಿ ನೀಲಕಂಠನ್ ಪರ ಟಿ ಎಂ ಶಾಹಿದ್ ತೆಕ್ಕಿಲ್ ನೇತೃತ್ವದಲ್ಲಿ ಬಿರುಸಿನ ಪ್ರಚಾರ…
ಕಾಸರಗೋಡು:ಕಾಸರಗೋಡು ಜಿಲ್ಲೆಯ ಉದುಮ ವಿಧಾನಸಭಾ ಕ್ಷೇತ್ರದ ಯು. ಡಿ . ಎಫ್ . ಅಭ್ಯರ್ಥಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನೀಲಕಂಠನ್ ಪರವಾಗಿ ಕರ್ನಾಟಕ ಸರಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಡಿ ಸಿ ಸಿ ಅಧ್ಯಕ್ಷರಾದ ಫೈಜಲ್, ಮಾಜಿ ಸಚಿವರಾದ ಸಿ. ಟಿ ಅಹ್ಮದ್ ಅಲಿ ಆಲಿ ,ಶಾಸಕರಾದ ಎನ್ ಎ ನೆಲ್ಲಿಕುನ್ ,ವಿದ್ಯಾಸಾಗರ್ ಕುಂಜಂಬು ನಾಯರ್, ಬಾಲಕೃಷ್ಣ ಪೆರಿಯ ಮೊದಲಾದವರು ಹಾಜರಿದ್ದರು.
ಸುಳ್ಯ ನಗರ ಪಂಚಾಯತ್ ನಾಮ ನಿರ್ದೇಶಕ ಸದಸ್ಯರಾದ ಸಿದ್ದೀಕ್ ಕೊಕ್ಕೊ, ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ, ಉಪಾಧ್ಯಕ್ಷರಾದ ಎಸ್ ಕೆ ಹನೀಫ್ ಮೊದಲಾದವರು ವಿವಿಧ ಸ್ಥಳಗಳಲ್ಲಿ ಪ್ರಚಾರ ಸಭೆಯಲ್ಲಿ ಭಾಗವಹಿಸಿದರು.







