ಭಾಸ್ಕರ ಸರಪಾಡಿ ಸಾರಥ್ಯದಲ್ಲಿ ನಂದಾವರ ಚಿಕ್ಕ ಮೇಳ ಆರಂಭ…

ಬಂಟ್ವಾಳ: ಕರ್ಕಾಟಕ ಸಂಕ್ರಮಣ ಶುಭದಿನದಂದು ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರ ಇಲ್ಲಿ ಪ್ರಥಮ ಸೇವೆ ಮಾಡುವ ಮೂಲಕ ಇಂದು ನಂದಾವರ ಚಿಕ್ಕಮೇಳದ ಮನೆಮನೆಗೆ ಯಕ್ಷಗಾನ ಸೇವೆ ಆರಂಭಗೊಂಡಿತು.
ಸಜಿಪಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಅರವಿಂದ ಭಟ್, ರಮೇಶ್ ಪನೋಲಿಬೈಲು, ಸಮಿತಿ ಸದಸ್ಯರಾದ ಅರುಣ್ ಕುಮಾರ್ ಕೆ, ಮೋಹನದಾಸ್ ಹೆಗಡೆ ನಗ್ರಿ ಜಯಶ್ರೀ ನಂದಾವರ ಅರ್ಚಕರಾದ ಪ್ರಕಾಶ್ ಮರಾಠೆ, ಮಂಜುನಾಥ್ ಭಟ್ ಮೊದಲಾದವರು ಉಪಸ್ಥಿತರಿದ್ದರು.