ಏ. 29 – ಅರಂತೋಡು ತೆಕ್ಕಿಲ್ ಪ್ರತಿಷ್ಠಾನದ 17 ನೇ ವರ್ಷದ ಸೌಹಾರ್ದ ಇಫ್ತಾರ್…

ಸುಳ್ಯ: ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ (ರಿ) ಅರಂತೋಡು ಇದರ ವತಿಯಿಂದ ನಡೆಸುವ 17ನೇ ವರ್ಷದ ಸೌಹಾರ್ದ ಇಫ್ತಾರ್ ಕೂಟ ದಿನಾಂಕ 29 ಎಪ್ರಿಲ್ 2022 ನೇ ಶುಕ್ರವಾರ ಸಂಜೆ 6 ಗಂಟೆಗೆ ಅರಂತೋಡು ತೆಕ್ಕಿಲ್ ಸಮುದಾಯ ಭವನದಲ್ಲಿ ನಡೆಯಲಿದೆ.
ಪ್ರತಿಷ್ಠಾನದ ಅಧ್ಯಕ್ಷರಾದ ಟಿ ಎಂ ಶಾಹೀದ್ ತೆಕ್ಕಿಲ್ ರವರ ಅಧ್ಯಕ್ಷತೆಯಲ್ಲಿ ಆಲ್ ಹಾಜ್ ಇಸಾಕ್ ಬಾಖವಿ, ಖತೀಬರು ಬದ್ರಿಯ ಜುಮಾ ಮಸ್ಜಿದ್ ಅರಂತೋಡು ದುವಾ ನೆರವೇರಿಸಲಿದ್ದು, ಸಮಾಜದ ನಾನಾ ಭಾಗಗಳ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಎಲ್ಲರನ್ನೂ ಸ್ವಾಗತಿಸುವುದಾಗಿ ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ ತಿಳಿಸಿದ್ದಾರೆ.

Related Articles

Back to top button