ನಭದ ತಾರೆ…

ನಭದ ತಾರೆ…

ನಿನ್ನ ಮೊಗದಲಿ ನಗೆಯ ಹುಣ್ಣಿಮೆ
ಚೆಲ್ಲಿ ಜಗವನು ಬೆಳಗಲು
ಅರಳಿ ನಿಂತಿಹ ಮೊಗದ ಸೊಗಸಿಗೆ
ಕಮಲ ನಾಚಿ ನಿಂತಿದೆ

ಎಲ್ಲ ಚಿಂತೆಯ ಮರೆಸುವಂತೆ
ಮೊಗದ ತುಂಬಾ ಹೂನಗು
ಬಿರಿದ ತುಟಿಗಳ ಅಂದ ಚಂದಕೆ
ನಭದ ತಾರೆ ಮಿನುಗಿದೆ

ಮುತ್ತಿನಂತೆಯೆ ಪೋಣಿಸಿಟ್ಟಿಹ
ದಂತಪಂಕ್ತಿಯ ನೋಡುತ
ಧವಳ ಕಾಂತಿಗೆ ಚೆಲುವ ರಾಶಿಗೆ
ಪ್ರೀತಿ ಮನದಲಿ ಉಕ್ಕಿದೆ

ಜಗದ ಸೃಷ್ಟಿಯ ಬೆರಗ ಕಾಣುತ
ಜೀವ ಜೀವದಿ ಅಚ್ಚರಿ
ಎಲ್ಲ ಕಾಲಕು ನಗುತ ನಲಿಯುವ
ಭಾವವನ್ನು ಹರಡಿದೆ

ಡಾ. ವೀಣಾ ಎನ್ ಸುಳ್ಯ

Related Articles

Back to top button