ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ – ಮಂಗಳೂರು ಪ್ರಾದೇಶಿಕ ಕಛೇರಿಯ ವಿಶೇಷ ಅಧಿಕಾರಿಯಾಗಿ ಡಾ. ಶಿವಕುಮಾರ್ ಹೊಸೊಳಿಕೆ…

ಮಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮಂಗಳೂರು ಪ್ರಾದೇಶಿಕ ಕಛೇರಿಯ ವಿಶೇಷ ಅಧಿಕಾರಿಯಾಗಿ ಡಾ. ಶಿವಕುಮಾರ್ ಹೊಸೊಳಿಕೆಯವರು ಮರುನೇಮಕಗೊಂಡಿದ್ದಾರೆ.
 ಸುಳ್ಯ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಉಪಪ್ರಾಂಶುಪಾಲ ಡಾ. ಶಿವಕುಮಾರ್ ಹೊಸೊಳಿಕೆಯವರು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮಂಗಳೂರು ಪ್ರಾದೇಶಿಕ ಕಛೇರಿಯ ವಿಶೇಷ ಅಧಿಕಾರಿಯಾಗಿ ಜೂನ್ 2018 ರಿಂದ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇವರನ್ನು ಮುಂದಿನ ಅವಧಿಗಾಗಿ ಇದೇ ಹುದ್ದೆಯಲ್ಲಿ ಮುಂದುವರಿಸುವ ಸಲುವಾಗಿ ಬೆಳಗಾವಿ ವಿ.ಟಿ.ಯು ಉಪಕುಲಪತಿಗಳಾದ ಡಾ. ಕರಿಸಿದ್ದಪ್ಪ ಅವರು ಆದೇಶ ನೀಡಿರುತ್ತಾರೆ.

 
 



