ಮಂಗಳೂರು:ಇಮ್ರಾನ್ ಖಾನ್ ಪಾಕಿಸ್ತಾನದಲ್ಲಿ ಗೆಲ್ಲಲು ಭಾರತವನ್ನು ಬೈಯ್ಯುತ್ತಾರೆ, ಮೋದಿ ಇಲ್ಲಿ ಗೆಲ್ಲಲು ಪಾಕಿಸ್ತಾನವನ್ನ ಬೈಯುತ್ತಾರೆ. ಪ್ರಧಾನಿ ಮೋದಿ ಮತ್ತು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಒಂದೇ ತಾಯಿಯ ಮಕ್ಕಳಿದ್ದಂತೆ, ಇಬ್ಬರೂ ಕೂಡ ಒಂದೇ ರೀತಿಯ ಜನರು. ಮೋದಿ ಕೂಡ ಇಮ್ರಾನ್ ಖಾನ್ ದಾರಿಯಲ್ಲಿಯೇ ಸಾಗುತ್ತಿದ್ದಾರೆ ಎಂದು ಮಾಜಿ ಸಚಿವ ರಮಾನಾಥ ರೈ ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಹಿಂದಿನ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರನ್ನು ಬಿಜೆಪಿ ಹಾಗೂ ಕೆಲವು ಸಂಘಟನೆಗಳು ತಪ್ಪಾಗಿ ಬಿಂಬಿಸಲು ಹೊರಟಿವೆ. ಅಕ್ರಮ ಮರಳುಗಾರಿಕೆ ವಿಚಾರದಲ್ಲಿ ಡಿಸಿ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಕೆಲಸ ಮಾಡಿದ್ದಾರೆ. ಈ ಹಿಂದೆ ಬಿಜೆಪಿ ಮುಖಂಡರು ಕೂಡ ಸೆಂಥಿಲ್ ಒಳ್ಳೆಯ ಅಧಿಕಾರಿ ಅಂದಿದ್ದಾರೆ. ಆದರೆ ಈಗ ಅವರನ್ನ ತಪ್ಪಿತಸ್ಥರು ಮಾಡುವ ಕೆಲಸ ನಡೆಯುತ್ತಿದೆ ಎಂದೂ ರಮಾನಾಥ್ ರೈ ಹೇಳಿದರು.
ನಮ್ಮ WhatsApp ಸಮುದಾಯಕ್ಕೆ ಸೇರಿ!ತ್ವರಿತ ಸುದ್ದಿ ಎಚ್ಚರಿಕೆಗಳನ್ನು ಪಡೆಯಿರಿ.
ನಮ್ಮ ರೋಮಾಂಚಕ WhatsApp ಸಮುದಾಯದೊಂದಿಗೆ ಸಂಪರ್ಕದಲ್ಲಿರಿ ಮತ್ತು ನೈಜ-ಸಮಯದ ಸುದ್ದಿ ಎಚ್ಚರಿಕೆಗಳನ್ನು ಸ್ವೀಕರಿಸಿ, ನೀವು ಯಾವಾಗಲೂ ತಿಳಿದಿರುತ್ತೀರಿ ಎಂದು ಖಚಿತಪಡಿಸಿಕೊಳ್ಳಿ. ನಮ್ಮ ವಿಶೇಷ WhatsApp ಗುಂಪು ಸಕಾಲಿಕ ನವೀಕರಣಗಳು, ಬ್ರೇಕಿಂಗ್ ನ್ಯೂಸ್ ಮತ್ತು ಇತ್ತೀಚಿನ ಘಟನೆಗಳಿಗೆ ನಿಮ್ಮ ಗೇಟ್ವೇ ಆಗಿದೆ. ಯಾವುದೇ ಪ್ರಮುಖ ಸುದ್ದಿಯನ್ನು ತಪ್ಪಿಸಿಕೊಳ್ಳಬೇಡಿ - ಈಗ ನಮ್ಮೊಂದಿಗೆ ಸೇರಿ ಮತ್ತು ತಿಳಿದುಕೊಳ್ಳಲು ಮೊದಲಿಗರಾಗಿ!