ಸುಳ್ಯ ಬ್ಲಾಕ್ ವತಿಯಿಂದ ಕಾಂಗ್ರೆಸ್ ಗ್ಯಾರಂಟಿ ಬಿಡುಗಡೆ, ಅಜ್ಜಾವರ ಕಾಂಗ್ರೆಸ್ ಸಮಾವೇಶ…
ನುಡಿದಂತೆ ನಡೆದ ಸರಕಾರ ನಡೆಸಿದ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ಜನ ಪರ : ಧನoಜಯ ಅಡ್ಪoಗಾಯ…

ಸುಳ್ಯ: ಸಿದ್ದರಾಮಯ್ಯರವರ ಕಳೆದ ಅವಧಿಯ ಸರಕಾರ 160 ಆಶ್ವಾಸನೆ ಗಲ್ಲಿ 158 ಈಡೇರಿಸಿದೆ, ಡಿಕೆಶಿ ಬಹಿರಂಗ ಚರ್ಚೆ ಆಹ್ವಾನಿಸಿದರೆ ಬಿಜೆಪಿ ಯವರಿಗೆ ಧೈರ್ಯವಿಲ್ಲ ಪ್ರತಿಯೊಬ್ಬ ನಾಯಕ ಮತ್ತು ಕಾರ್ಯಕರ್ತ ಮನೆ ಮನೆಗೆ ಭೇಟಿ ನೀಡಿ ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್, ಮನೆಯ ಮಹಿಳಾ ಯಜಮಾನಿಗೆ ಪ್ರತಿ ತಿಂಗಳು ರೂ.2000, ಅನ್ನಭಾಗ್ಯ ಉಚಿತ 10 ಕೆಜಿ ಅಕ್ಕಿ ಮೊದಲಾದ ಯೋಜನೆಯ ಗ್ಯಾರಂಟಿ ಕಾರ್ಡ್ ಹಂಚಿ ವಿಶ್ವಾಸರ್ಹತೆ ಪಡೆದು ಕಾಂಗ್ರೆಸ್ ನ್ನು ಮುಂದಿನ ಚುನಾವಣೆ ಯಲ್ಲಿ ಅಧಿಕಾರಕ್ಕೆ ತನ್ನಿ ಎಂದು ಕೆಪಿಸಿಸಿ ರಾಜ್ಯ ಪ್ರಾಧಾನ ಕಾರ್ಯದರ್ಶಿ ದನoಜಯ ಅಡ್ಪoಗಾಯ ಕರೆ ನೀಡಿದರು,
ಸುಳ್ಯ ಬ್ಲಾಕ್ ಕಾಂಗ್ರೆಸ್ ಅಜ್ಜಾವರ ವಲಯ ಸಮಿತಿ ವತಿಯಿಂದ ಆಯೋಜಿಸಲಾದ ಕಾಂಗ್ರೆಸ್ ಸಮಾವೇಶ ದಲ್ಲಿ ಕಾಂಗ್ರೆಸ್ ಗ್ಯಾರಂಟಿ ಬಿಡುಗಡೆ ಗೊಳಿಸಿ ಮಾತನಾಡುತ್ತಿದ್ದರು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ. ಸಿ. ಜಯರಾಮ್ ಅಧ್ಯಕ್ಷತೆ ವಹಿಸಿದ್ದರು.
ಪ್ರಧಾನ ಭಾಷಣಗಾರರಾಗಿ ದಕ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ. ವೆಂಕಪ್ಪಗೌಡ, ಯುವ ಕಾಂಗ್ರೆಸ್ ರಾಷ್ಟ್ರೀಯ ಸಂಯೋಜಕ ಸುಳ್ಯ ಕ್ಷೇತ್ರ ಉಸ್ತುವಾರಿ ಕಮಲ್ಜಿತ್ ಕಣ್ಣೂರ್,ಕೆಪಿಸಿಸಿ ಸಂಯೋಜಕರು ಗಳಾದ ಎಚ್. ಎಂ.ನಂದಕುಮಾರ್, ಜಿ.ಕೃಷ್ಣಪ್ಪ ಮಾಜಿ ಕೆಪಿಸಿಸಿ ಸದಸ್ಯ ಡಾ ರಘು, ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಎಂ.ಮುಸ್ತಫ,ಯುವ ಕಾಂಗ್ರೆಸ್ ಅಧ್ಯಕ್ಷ ಶಾಹುಲ್ ಹಮೀದ್, ಮಹಿಳಾ ಘಟಕ ಅಧ್ಯಕ್ಷೆ ಗೀತಾ ಕೊಲ್ಚಾ,ರ್ ಮತ್ತು ಎನ್ ಎಸ್ ಯು ಐ ಅಧ್ಯಕ್ಷ ಕೀರ್ತನ್ ಕೊಡೆಪಾಲ,ಇಂಟಕ್ ಅಧ್ಯಕ್ಷ ಶಾಫಿ ಕುತ್ತಾಮೊಟ್ಟೆ, ಮಾಜಿ ಜಿ. ಪo. ಸದಸ್ಯೆ ರಾಜೀವಿ ರ್ ರೈ ಬೆಳ್ಳಾರೆ,ಸಂಪಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಮಹಮ್ಮದ್ ಕುಂಞ ಗೂನಡ್ಕ, ಮಾಜಿ ತಾ. ಪo. ಸದಸ್ಯ ತೀರ್ಥರಾಮ ಜಾಲಸೂರ್. ಗೋಕುಲದಾಸ್ ಸುಳ್ಯ, ಶ್ರೀಮತಿ ಸುಜಯಕೃಷ್ಣ, ಅಜ್ಜಾವರ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಲೀಲಾ ಮನಮೋಹನ, ಮಾಜಿ ಅಧ್ಯಕ್ಷ ಪ್ರಸಾದ ರೈ, ಸದಸ್ಯರು ಗಳಾದ ರಾಹುಲ್ಅಡಪoಗಾಯ, ಜಯರಾಮ್, ದೇವಕಿ, ಗೀತಾ, ವಿಶ್ವನಾಥ್ ಅಜ್ಜಾವರ, ಶ್ವೇತಾ ಶಿರ್ವಾಜೆ,ಬೇಬಿ ಕಲ್ತಡ್ಕ, ಅಬ್ದುಲ್ಲ ಅಜ್ಜಾವರ, ಮಾಜಿ ತಾ. ಪo. ಸದಸ್ಯೆ ಅನಸೂಯ, ಕಾಂಗ್ರೆಸ್ ಧುರೀಣರುಗಳಾದ ರಂಜಿತ್ ಮೇನಾಲ,ಮಂಡೆಕೋಲು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸದಾನಂದ ಮಾವಜಿ, ಯುವ ಕಾಂಗ್ರೆಸ್ ಮಾಜಿ ಬೂತ್ ಅಧ್ಯಕ್ಷ ಖಾದರ್,ಮೊದಲಾದವರು ಉಪಸ್ಥಿತರಿದ್ದರು
ಶ್ರೀಧರ್ ಮೇನಾಲ, ಗಂಗಾಧರ್ ಮೇನಾಲ ಕಾರ್ಯಕ್ರಮ ನಿರೂಪಿಸಿದರು.
