ಸುಳ್ಯದಲ್ಲಿ ಚರಿತ್ರೆ ಪ್ರಸಿದ್ಧ ಐತಿಹಾಸಿಕ ಕಾಜೂರು ಉರೂಸ್ ಕಾರ್ಯಕ್ರಮದ ಪ್ರಚಾರ…
ಸುಳ್ಯ: ಚರಿತ್ರೆ ಪ್ರಸಿದ್ಧ ಐತಿಹಾಸಿಕ ಕಾಜೂರು ಉರೂಸ್ ಕಾರ್ಯಕ್ರಮವು ಜ. 24 ರಿಂದ ಫೆ. 3 ರ ತನಕ ನಡೆಯಲಿದೆ.
ಧಾರ್ಮಿಕ ಮತಪ್ರವಚನ, ಸಾಮೂಹಿಕ ಕೂಟು ಝಿಯಾರತ್, ಬೃಹತ್ ಝಿಕ್ರ್ ಮಜ್ಲಿಸ್, ಬುರ್ದಾ ಮತ್ತು ಮೌಲಿದ್ ಮಜ್ಲಿಸ್, ಖತ್ಮುಲ್ ಕುರ್ಆನ್, ನೂತನ ಕಟ್ಟಡ ಉದ್ಘಾಟನೆ, ಬೃಹತ್ ಅನ್ನದಾನ ಸಹಿತ ವಿವಿಧ ಕಾರ್ಯಕ್ರಮಗಳಿಂದ ಈ ವರ್ಷದ ಉರೂಸ್ ಸಂಪನ್ನಗೊಳ್ಳಲಿದೆ.
ಸುಲ್ತಾನುಲ್ ಉಲಮಾ ಎ ಪಿ ಉಸ್ತಾದ್, ಕೆ ಎಸ್ ಆಟ್ಟಕೋಯ ತಂಙಳ್ ಕುಂಬೋಲ್, ಮಾಣಿ ಉಸ್ತಾದ್, ಕಾವಲ್ಕಟ್ಟೆ ಹಝ್ರತ್, ಕಾಜೂರು ತಂಙಳ್, ಸಾದಾತ್ ತಂಙಳ್, ಮುತ್ತನೂರು ತಂಙಳ್, ಯು ಟಿ ಖಾದರ್, ಝಮೀರ್ ಅಹ್ಮದ್, ಶಾಫಿ ಸಅದಿ ಸಹಿತ ಹಲವಾರು ಧಾರ್ಮಿಕ, ಸಾಮಾಜಿಕ, ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ.
ಇದರ ಪ್ರಚಾರವು ಸುಳ್ಯದ ಸಾಮಾಜಿಕ, ರಾಜಕೀಯ, ಧಾರ್ಮಿಕ ನಾಯಕರ ಉಪಸ್ಥಿತಿಯಲ್ಲಿ ಸುಳ್ಯದಲ್ಲಿ ನಡೆಯಿತು.
ಕಾಜೂರು ಉರೂಸ್ ಸಮಿತಿ ಸದಸ್ಯರಾದ ನಿಝಾಂ ಜೆ ಹೆಚ್ ಕಾಜೂರು, ಖಲೀಲ್ ಉಸ್ತಾದ್, ಸಾಬಿತ್ ಉಸ್ತಾದ್, ಸುಳ್ಯ ನಗರ ಪಂಚಾಯತ್ ಸದಸ್ಯರಾದ ಉಮ್ಮರ್ ಕೆ ಎಸ್, ಶರೀಫ್ ಕಂಠಿ, ಸಿದ್ದೀಕ್ ಕೊಕ್ಕೋ, ಮುಸ್ಲಿಂ ಯೂತ್ ಫೆಡರೇಶನ್ ಸುಳ್ಯ ಪ್ರಮುಖರಾದ ರಶೀದ್ ಜಟ್ಟಿಪ್ಪಳ್ಳ, ಉನೈಸ್ ಪೆರಾಜೆ, ಖಲಂದರ್ ಎಲಿಮಲೆ, ಕರ್ನಾಟಕ ಮುಸ್ಲಿಂ ಜಮಾಅತ್ ಸುಳ್ಯ ಝೋನ್ ಕಾರ್ಯದರ್ಶಿ ಹಮೀದ್ ಸುಣ್ಣಮೂಲೆ, ಎಸ್ ವೈ ಎಸ್ ನ ಹಾರಿಸ್ ಬೋರುಗುಡ್ಡೆ, ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ನಾಯಕರಾದ ಕಬೀರ್ ಜಟ್ಟಿಪ್ಪಳ್ಳ, ಸಾದಿಕ್ ಮಾಸ್ಟರ್, ಆಬಿದ್ ಕಲ್ಲುಮುಟ್ಲು, ಸಂಪಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಹನೀಫ್ ಎಸ್ ಕೆ, ಇಂಜಿನಿಯರ್ ನಾಸಿರ್ ಪೆರಾಜೆ, ಮುನಾಫರ್ ಸಹಿತ ಹಲವಾರು ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ಮುಖಂಡರು ಉಪಸ್ಥಿತರಿದ್ದರು.