ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಬೆಂಗಳೂರು ಅಧ್ಯಕ್ಷರಾಗಿ ಬಂಟ್ವಾಳದ ಹಾ. ಮ. ಸತೀಶ್ ಆಯ್ಕೆ…

ಬಂಟ್ವಾಳ: ಎ.೨೦ : ಬಿಸಿರೋಡಿನಲ್ಲಿ ಶಿಕ್ಷಕರಾಗಿ ,ಪತ್ರಕರ್ತರಾಗಿ ಎರಡು ದಶಕಗಳ ಹಿಂದೆ ಸೇವೆ ಸಲ್ಲಿಸಿದ್ದ ಸಂಘಟಕ, ಸಾಹಿತಿ, ಹಾ. ಮ. ಸತೀಶ ಗೂಡಿನಬಳಿ ಬೆಂಗಳೂರು ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಶಾರೀರಿಕ ಶಿಕ್ಷಕರಾಗಿ ಸೇವೆ ಸೇವೆ ಸಲ್ಲಿಸುತ್ತಿದ್ದ ಇವರು ಚುಟುಕು ಕವಿಯಾಗಿ ಗುರುತಿಸಲ್ಪಟ್ಟಿದ್ದು 1997 ರಲ್ಲಿ ಬಂಟ್ವಾಳ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಸ್ಥಾಪನೆ ಮಾಡಿ ಹಲವು ಸಮ್ಮೇಳನಗಳನ್ನು ನಡೆಸಿದ್ದರು. ಗೋಳ್ತಮಜಲಿನಲ್ಲಿ ನಡೆದ ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಅದ್ದೂರಿ ಸಮ್ಮೇಳನ ನಡೆಸಿದ್ದರು. ನಂದಾವರದಲ್ಲಿ ಚುಟುಕು ಸಾಹಿತ್ಯ ಸಮ್ಮೇಳನ ನಡೆಸಿ ಹಲವು ಯುವಕವಿಗಳಿಗೆ ಅವಕಾಶ ನೀಡಿ ಸನ್ಮಾನ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಆಸರೆ,ಕೊನೆಯ ನಿಲ್ದಾಣ ಕವನ ಸಂಕಲನ, ಹನಿಹನಿ ಜೇನು,ಜಿನುಗುವ ಸೋನೆ ಮಳೆ ಹನಿಗವನಗಳು,ಭಕ್ತಿ ಗೀತೆ,ಗಝಲ್, ವೈಚಾರಿಕ ಲೇಖನಗಳ ಸಂಕಲನಗಳ ೧೩ ಕೃತಿಗಳನ್ನು ಸಾಹಿತ್ಯಲೋಕಕ್ಕೆ ಅರ್ಪಣೆ ಮಾಡಿದ್ದಾರೆ.

ಪರಿಷತ್ತು ಕೇಂದ್ರ ಸಮಿತಿಯ ಕರ್ನಾಟಕ ರಾಜ್ಯ ಸಂಚಾಲಕರಾದ ಜಯಾನಂದ ಪೆರಾಜೆಯವರು ನಾಮ ನಿರ್ದೇಶನ ಮಾಡಿದರು. ಇನ್ನೊರ್ವ ರಾಜ್ಯ ಸಂಚಾಲಕರಾದ ಡಾ. ಶಾಂತಾ ಪುತ್ತೂರು ಅನುಮೋದಿಸಿ ಅಭಿನಂದನೆ ಸಲ್ಲಿಸಿದರು. ಸರ್ವಾನುಮತಿಯಿಂದ ಆಯ್ಕೆಯಾದ ಶ್ರೀ ಹಾ. ಮ. ಸತೀಶ‌ ಇವರಿಗೆ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಸ್ಥಾಪಕರಾದ ಡಾ. ವಾಮನ್ ರಾವ್ ಬೇಕಲ್ ಕನ್ನಡ ಧ್ವಜ ನೀಡಿ ಅಧ್ಯಕ್ಷ ಪದವಿಯನ್ನು ಹಸ್ತಾಂತರಿಸಿ ಶುಭಕೋರಿದರು.

ಕಿನ್ನಿಗೋಳಿಯ ಯುಗ ಪುರುಷ ಸಭಾ ಭವನದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಘಟಕ ಉದ್ಘಾಟನಾ ಸಮಾರಂಭದಲ್ಲಿ ಇವರಿಗೆ ಅಧಿಕಾರ ನೀಡಲಾಯಿತು. ಕಾರ್ಯಕ್ರಮದಲ್ಲಿ ಸಂದ್ಯಾ ರಾಣಿ ಟೀಚರ್, ಸತೀಶ್ ಕೂಡ್ಲು,ದ.ಕ. ಜಿಲ್ಲಾಧ್ಯಕ್ಷ ಡಾ. ಕೊಳ್ಚಪ್ಪೆ ಗೋವಿಂದ ಭಟ್, ಲಕ್ಷ್ಮೀ ವಿ. ಭಟ್, ಸತ್ಯವತಿ ಭಟ್ ಕೊಳಚಪ್ಪು, ಕನ್ನಡ ಭವನ ಉಪಾಧ್ಯಕ್ಷ ಪ್ರಾಂಶುಪಾಲ ರಾಜೇಶ್ಚಂದ್ರ ಮೊದಲಾದವರಿದ್ದರು.

whatsapp image 2025 04 20 at 2.47.34 pm

Sponsors

Related Articles

Back to top button