ಮಾಸದಂಗಳದಲ್ಲಿ ಕವಿ -ಬೆಳಕು ಕಾರ್ಯಕ್ರಮ….

ವರದಿ:ಹಾ. ಮ ಸತೀಶ ಬೆಂಗಳೂರು
ಮೈಸೂರು: ಮಂದಗೆರೆ ಕಲೆ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಪುಷ್ಕರ ಪ್ರಿಂಟರ್ಸ್ ಮತ್ತು ಪಬ್ಲಿಷರ್ಸ್ ಇವರ ಸಂಯುಕ್ತ ಆಶ್ರಯದಲ್ಲಿ ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್, ಶ್ರೀ ಜಯಚಾಮರಾಜೇಂದ್ರ ಒಡೆಯರ್ ಸಂಗೀತ ಕಲಾನಿಧಿ ಶ್ರೀ ಮೈಸೂರು ವಾಸುದೇವಾಚಾರ್ಯರ ಸಂಸ್ಮರಣಾರ್ಥ ಮಾಸದಂಗಳದಲ್ಲಿ ಕವಿ -ಬೆಳಕು ಆರನೇ ಕಾರ್ಯಕ್ರಮ ಇಟ್ಟುಕೊಂಡಿದ್ದು, ಅದರಲ್ಲಿ ಸಂಗೀತ, ನೃತ್ಯೋತ್ಸವ , ಉದಯೋನ್ಮುಖ ಲೇಖಕರ ಕೃತಿಗಳ ಲೋಕಾರ್ಪಣೆ ಮತ್ತು ಕವಿಗೋಷ್ಠಿ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳು ಜೂ.29 ರಂದು ಮೈಸೂರಿನ ಕುವೆಂಪು ನಗರದಲ್ಲಿ ಇರುವ ಗಾನ ಭಾರತಿ ವೀಣೆ ಶೇಷಣ್ಣ ಭವನದಲ್ಲಿ ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ 6 ಘಂಟೆಯವರೆಗೆ ಯಶಸ್ವಿಯಾಗಿ ನಡೆಯಿತು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಏಳು ಜನ ಮಹಿಳಾ ಬರಹಗಾರ್ತಿಯರ ವೈವಿಧ್ಯಮಯ ಕೃತಿಗಳು ಬಿಡುಗಡೆ ಆಯಿತು. ಅದರಲ್ಲಿ ಒಬ್ಬರಾದ ಶ್ರೀಮತಿ ಮಮತಾ ಕೆ ಎಸ್ ಇವರ ಚೊಚ್ಚಲ ಗಝಲ್ ಸಂಕಲನ ಚೈತ್ರ ಚಿತ್ತಾರ ಪುಸ್ತಕವೂ ಬಿಡುಗಡೆ ಆಯಿತು .ಆ ಪುಸ್ತಕಕ್ಕೆ ಮುನ್ನುಡಿ ಬರೆದಿರುವ ಖ್ಯಾತ ಸಾಹಿತಿ ಹಾ. ಮ ಸತೀಶ ಬೆಂಗಳೂರು ಇವರು ಕೃತಿ ಪರಿಚಯ ಮಾಡುತ್ತಾ, ಇಂದು ನನಗೆ ಬಹಳ ಸಂತಸ ಕೊಟ್ಟ ವಿಚಾರ. ಶ್ರೀಮತಿ ಮಮತಾ ಕೆ ಎಸ್ ಇವರು ಗಝಲ್ ನಲ್ಲಿ ನನ್ನ ಶಿಷ್ಯೆರಲ್ಲಿ ಒಬ್ಬರೆನ್ನಲು ಖುಷಿಯಾಗುತ್ತಿದೆ. ನನ್ನ ಗುರುಗಳು ರಾಜ್ಯದ ಹೆಸರಾಂತ ಗಝಲ್ ಕಾರರಾದ ಮೊಹಮ್ಮದ್ ಬಡ್ಡೂರ್ ರವರು ಮತ್ತು ಇನ್ನೊಬ್ಬರು ಡಾ. ಸುರೇಶ ನೆಗಳಗುಳಿ. ಅವರಿಂದ ಕಲಿತ ನಾನು ಇವರಿಗೆ ಕಲಿಸಿದ ಪರಿಣಾಮ ಇಂದು ಈ ಸಂಕಲನ ಹೊರ ಬಂದಿದೆ ಎಂದರು. 82 ಗಝಲ್ ಇರುವ ಸಂಕಲನದ ಒಳ ಹೊರಗನ್ನು ಸಮರ್ಥವಾಗಿ ವಿವರಿಸಿದ ಅವರು ಎಲ್ಲಾ ಓದುಗರೂ ಈ ಸಂಕಲನವನ್ನು ಪ್ರೀತಿಯಿಂದ ಕೊಂಡು ಓದಿರಿ, ಜೊತೆಗೆ ಪ್ರೋತ್ಸಾಹಿಸಿ ಎಂದರು. ಹಾಗೆ ಇದು ಮಮತಾ ಕೆ ಎಸ್ ಅವರ ಚೊಚ್ಚಲ ಕೃತಿ ಎಂದ ಅವರ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕೃತಿಗಳು ಅವರ ಲೇಖನಿಯಿಂದ ಹೊರ ಬರಲೆಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮ ನಿಯೋಜಿಸಿದವರು ಮಮತಾ ಕೆ ಎಸ್ ಮತ್ತು ಹಾ. ಮ ಸತೀಶ ಬೆಂಗಳೂರು ಇವರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಿದರು.
ವೇದಿಕೆಯಲ್ಲಿ ಖ್ಯಾತ ಸಾಹಿತಿ ಎಂ ಎಸ್ ಸೋಮಶೇಖರ್, ಸಮಾರಂಭ ಕ್ಕೆ ಕಾರಣಕರ್ತರಾದ ಶ್ರೀಯುತ ಮಂದಗೆರೆ ರಾಮಕುಮಾರ್, ಶ್ರೀಮತಿ ಅನಿತಾ ಪಿ ಕೆ ಇನ್ನೂ ಅನೇಕ ಗಣ್ಯರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ನಿರೂಪಿಸಿದವರು ಖ್ಯಾತ ನಿರೂಪಕಿಯವರಾದ ಶ್ರೀಮತಿ ತಾರಾ ನಂಜುಂಡ ಶಾಸ್ತ್ರೀ ಹಾಗು ಶ್ರೀಮತಿ ಚಂಪಾರವರು.