ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯಕ್ಕೆ ಕರ್ನಾಟಕ ವಿಧಾನಸಭಾ ನಿಯೋಗದ ಭೇಟಿ…

ಬೆಂಗಳೂರು: ವಿಧಾನಸಭಾ ಸ್ಪೀಕರ್ ಶ್ರೀ ಯು.ಟಿ. ಖಾದರ್ ಅವರ ನೇತೃತ್ವದಲ್ಲಿ ಕರ್ನಾಟಕ ವಿಧಾನಸಭೆಯ ನಿಯೋಗವು ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಪ್ರಸಿದ್ಧ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿತು.
ನಿಯೋಗದಲ್ಲಿ ಶಾಸಕರಾದ ಶ್ರೀ ಮಂಜುನಾಥ್ ಭಂಡಾರಿ, ಶ್ರೀ ಪಿ.ಎಂ. ಅಶೋಕ್ ಪಟ್ಟಣ್, ಶ್ರೀ ದಿನೇಶ್ ಗೂಳಿ ಗೌಡ, ಶ್ರೀ ಶ್ರೀನಿವಾಸ್ ಮಾನೆ, ಶ್ರೀ ಗುರುರಾಜ್ ಗಂಟೆಹೊಳೆ, ಶ್ರೀ ಸುರೇಶ್ ಬಾಬು, ಶ್ರೀ ಅಶೋಕ್ ರೈ ಮತ್ತು ಶ್ರೀ ಗುರ್ಮೆ ಸುರೇಶ್ ಶೆಟ್ಟಿ ಸೇರಿದ್ದರು.

ಭೇಟಿಯ ಅಂಗವಾಗಿ ನಿಯೋಗವು ಸ್ಟ್ಯಾನ್ಫೋರ್ಡ್ ಸ್ಕೂಲ್ ಆಫ್ ಮೆಡಿಸಿನ್‌ನ ಸಹಾಯಕ ಪ್ರಾಧ್ಯಾಪಕರಾದ ಮತ್ತು ಸ್ಟ್ಯಾನ್ಫೋರ್ಡ್ ಬೈಯರ್ಸ್ ಸೆಂಟರ್ ಫಾರ್ ಬಯೋಡಿಸೈನ್‌ನ ಗ್ಲೋಬಲ್ ಔಟ್‌ರೀಚ್ ನಿರ್ದೇಶಕರಾದ ಡಾ. ಅನುರಾಗ್ ಮೈರಾಲ್ ಅವರ ನೇತೃತ್ವದ ಬಯೋಡಿಸೈನ್ ಪ್ರಯೋಗಾಲಯಕ್ಕೆ ಭೇಟಿ ನೀಡಿತು. ಅವರು ಸೆಂಟರ್ ಫಾರ್ ಇನ್ನೋವೇಶನ್ ಇನ್ ಗ್ಲೋಬಲ್ ಹೆಲ್ತ್‌ನ ಪ್ರಮುಖರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಈ ಪ್ರಯಾಣವು ಶಾಸಕರಿಗೆ ಆರೋಗ್ಯ ಮತ್ತು ವೈದ್ಯಕೀಯ ತಂತ್ರಜ್ಞಾನ ಕ್ಷೇತ್ರದಲ್ಲಿ ನಡೆಯುತ್ತಿರುವ ಆಧುನಿಕ ಸಂಶೋಧನೆಗಳ ಬಗ್ಗೆ ಆಳವಾದ ಅರಿವನ್ನು ನೀಡಿತು. ಮುಂದಿನ ದಿನಗಳಲ್ಲಿ ಕರ್ನಾಟಕದ ಆರೋಗ್ಯ ವ್ಯವಸ್ಥೆಯಲ್ಲೂ ಇಂತಹ ಉನ್ನತ ತಂತ್ರಜ್ಞಾನಗಳ ಅನ್ವಯವಾಗುವ ಅವಕಾಶಗಳ ಕುರಿತು ಚರ್ಚೆ ನಡೆಯಿತು.
ಈ ಭೇಟಿಯನ್ನು ಶ್ರೀ ಮಂಜುನಾಥ್ ಭಂಡಾರಿ ಅವರು, ಖ್ಯಾತ ಉದ್ಯಮಿ ಶ್ರೀ ಜೆಪಿ ಅವರ ಸಹಕಾರದೊಂದಿಗೆ ಯಶಸ್ವಿಯಾಗಿ ಸಂಯೋಜಿಸಿದ್ದರು.

visit stanford university 02

Related Articles

Back to top button