ದಾವಣಗೆರೆ ಉಪಚುನಾವಣೆ – ಡಿ ಕೆ ಶಿವಕುಮಾರ್ ಮತ್ತಿತರ ನಾಯಕರ ಜೊತೆ ಬಿರುಸಿನ ಮತ ಬೇಟೆ ನಡೆಸಿದ ಟಿ ಎಂ ಶಾಹಿದ್ ತೆಕ್ಕಿಲ್…
ದಾವಣಗೆರೆ: ದಾವಣಗೆರೆ ದಕ್ಷಿಣ ಉಪ ಚುನಾವಣೆಯ ವಾರ್ಡ್ ಎಂಟರ ಸುರೇಶ್ ನಗರ (ಜಾಲಿನಗರ)ದಲ್ಲಿ ಕೆಪಿಸಿಸಿ ಉಸ್ತುವಾರಿಗಳಾದ ಕರ್ನಾಟಕ ಸರಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರೂ ಮತ್ತು ಪ್ರಧಾನ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಟಿ ಎಂ ಶಾಹಿದ್ ತೆಕ್ಕಿಲ್ ಇವರು 8 ದಿನಗಳ ಕಾಲ ದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣ ಪ್ರಚಾರವನ್ನು ವಾರ್ಡ್ ಸಂಖ್ಯೆ- 8 ರಲ್ಲಿ ಸುರೇಶ್ ನಗರದ ಬೂತ್ ಸಂಖ್ಯೆ 56, 57, 58, 59, 60, 61, 62, 63 ರಲ್ಲಿ ಕುಣಿಗಲ್ ಶಾಸಕರು ಶ್ರೀ ಹೆಚ್.ಡಿ ರಂಗನಾಥ್ ಜೊತೆಯಲ್ಲಿ ಸುಮಾರು 800 ಕ್ಕೂ ಹೆಚ್ಚು ಮನೆ ಭೇಟಿ ಮತ್ತು 4675 ಮತದಾರರನ್ನು ನೇರವಾಗಿ ಭೇಟಿಯಾಗಿ ಮತ ಚಲಾಯಿಸಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಕಾರ್ಪೊರೇಟರ್ ಚಂದ್ರಪ್ಪ, ವಾರ್ಡ್ ಅಧ್ಯಕ್ಷ ವಿಶ್ವನಾಥ್ ಸದಸ್ಯರಾದ ಶಿವಾಜಿ, ಮುಬಾರಕ್, ಸುರೇಶ್, ರಹ್ಮತ್,ಸುದರ್ಶನ್, ರಾಜೇಶ್ ಉಪಸ್ಥಿತರಿದ್ದರು. ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಯ ಕೊನೆಯ ಪ್ರಚಾರದ ದಿನದಂದು ಪ್ರಚಾರವನ್ನು ದಾವಣಗೆರೆ ನಗರದ ಮುಸ್ಲಿಂ ಬಾಹುಳ್ಯವುಳ್ಳ ಪ್ರದೇಶಗಳಾದ ಆಜಾದ್ ನಗರ, ಭಾಷಾ ನಗರ ಸೇರಿ ಪ್ರಮುಖ ನಗರಗಳಲ್ಲಿ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸನ್ಮಾನ್ಯ ಉಪ ಮುಖ್ಯ ಮಂತ್ರಿಗಳು ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ.ಕೆ. ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ನಾಸಿರ್ ಹುಸೇನ್ ಎಂ ಪಿ,ಸಂಸದರಾದ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ, ಮಾಜಿ ಕ್ರಿಕೆಟಿಗರಾದ ಅಜರುದ್ದಿನ್, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ, ಸಚಿವರಾದ ಎಂ ಸಿ ಸುಧಾಕರ್, ಮಾಂಕಾಳು ವೈದ್ಯ, ವಿಧಾನ ಪರಿಷತ್ ಸರ್ಕಾರಿ ಮುಖ್ಯ ಸಚೇತಕರಾದ ಸಲೀಂ ಅಹ್ಮದ್, ಬೆಂಗಳೂರು ಶಿವಾಜಿನಗರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ರಿಜ್ವಾನ್ ಅರ್ಷದ್, ಸುಳ್ಯ ನಗರ ಸಭೆಯ ನಾಮ ನಿರ್ದೇಶಿತ ಸದಸ್ಯ ಸಿದ್ದಿಕ್ ಕೊಕ್ಕೋ ಹಾಗೂ ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯಾದ ಸಮರ್ಥ ಶಾಮನೂರ್ ಮಲ್ಲಿಕಾರ್ಜುನ ಜೊತೆ ಸೇರಿ ಕೊನೆಯ ದಿನ ರೋಡ್ ಶೋ ಮತ್ತು ಬಹಿರಂಗ ಪ್ರಚಾರವನ್ನು ನಡೆಸಿದ್ದಾರೆ.ಉಪ ಚುನಾವಣೆಯಲ್ಲಿ ದಾವಣಗೆರೆಯಲ್ಲಿ ಮೂವತ್ತು ಸಾವಿರಕ್ಕೂ ಮಿಕ್ಕಿ ಮತಗಳಿಂದ ಜಯಶಾಲಿ ಆಗಲಿದ್ದಾರೆ ಎಂದು ಟಿ ಎಂ ಶಹೀದ್ ತೆಕ್ಕಿಲ್ ಮಾಧ್ಯಮಗಳಿಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.





