ರಾಜ್ಯ ಸರಕಾರದಿಂದ 72,186 ಸರಕಾರಿ ಉದ್ಯೋಗಕ್ಕೆ ನೇರ ನೇಮಕಾತಿಗೆ ಚಾಲನೆ – ಟಿ ಎಂ ಶಾಹಿದ್ ತೆಕ್ಕಿಲ್ ಅಭಿನಂದನೆ …

ಬೆಂಗಳೂರು: ಕೇಂದ್ರ ಸರಕಾರದ ವರ್ಷಕ್ಕೆ ಎರಡು ಕೋಟಿ ಉದ್ಯೋಗ ನಿರೀಕ್ಷಿಸಿದ್ದ ಯುವಕರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಸಿಹಿಸುದ್ದಿ ದೊರೆತಿದ್ದು 72,186 ಸರಕಾರಿ ಉದ್ಯೋಗಕ್ಕೆ ನೇರ ನೇಮಕಾತಿಗೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಚಾಲನೆ ನೀಡಿರುವುದನ್ನು ರಾಜ್ಯ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಪ್ರಶಂಸಿಸಿದ್ದಾರೆ .
ಬಿಜೆಪಿ ನೇತೃತ್ವದ ಕೇಂದ್ರ ನರೇಂದ್ರ ಮೋದಿ ಸರ್ಕಾರದಿಂದ ನಿರೀಕ್ಷಿತ ಭರವಸೆಯಂತೆ ವಾರ್ಷಿಕ ಎರಡು ಕೋಟಿ ಉದ್ಯೋಗಾವಕಾಶಗಳು ಸಿಗುತ್ತಿಲ್ಲ ಎಂಬ ಟೀಕೆಗಳ ನಡುವೆಯೇ, ಡಿ ಕೆ ಶಿವಕುಮಾರ್ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರವು ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ವಿವಿಧ ಇಲಾಖೆಗಳ ಒಟ್ಟು 72,186 ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಚಾಲನೆ ನೀಡಿದೆ.
ಕಾಂಗ್ರೆಸ್ ಸರಕಾರದ ಸಾಲಿನಲ್ಲಿ ಹುದ್ದೆಗಳ ಭರ್ತಿ ಪ್ರಕ್ರಿಯೆ ಆಗುತ್ತಿದ್ದುಹುದ್ದೆಗಳ ನೇಮಕಾತಿ ವಿವಿಧ ಹಂತಗಳಲ್ಲಿ ಮುಂದುವರಿದಿದೆ. ಈ ಹುದ್ದೆಗಳು ರಾಜ್ಯದ 17 ಇಲಾಖೆಗಳ ಅಡಿಯಲ್ಲಿ ಭರ್ತಿಯಾಗಲಿದ್ದು, ಮುಂದಿನ ಹಂತದಲ್ಲಿ ಇನ್ನೂ 34 ಇಲಾಖೆಗಳ ನೇಮಕಾತಿ ಪ್ರಕ್ರಿಯೆಯೂ ಆರಂಭವಾಗಲಿದೆ.
ರಾಜ್ಯ ಸರ್ಕಾರದ ಈ ಕ್ರಮವು ಲಕ್ಷಾಂತರ ಉದ್ಯೋಗಾಕಾಂಕ್ಷಿಗಳಿಗೆ ಹೊಸ ಭರವಸೆ ಮೂಡಿಸಿದ್ದು, ನರೇಂದ್ರ ಮೋದಿ ಅವರ ಕೇಂದ್ರ ಸರಕಾರದ ಪ್ರಣಾಳಿಕೆಯಂತೆ ವರ್ಷಕ್ಕೆ ಎರಡು ಕೋಟಿಯಂತೆ ಕಳೆದ ಹನ್ನೆರಡು ವರ್ಷದಲ್ಲಿ ಇಪ್ಪತ್ತನಾಲ್ಕು ಕೋಟಿ ಸರ್ಕಾರಿ ಉದ್ಯೋಗ ನೀಡಿ ದೇಶದ ಯುವಕರ ಬಾಳಿಗೆ ದಾರಿದೀಪ ಆಗಬೇಕಿತ್ತು. ಆದರೆ ಕೇವಲ ಧಾರ್ಮಿಕ ವಿಷಯಗಳಿಗೆ ಪ್ರಾಮುಖ್ಯತೆ ನೀಡಿ ಯುವಕರನ್ನು ವಂಚಿಸುತ್ತಿದ್ದಾರೆ. ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ರಾಜ್ಯಸರಕಾರದ ಡಿ ಕೆ ಶಿವಕುಮಾರ್ ಅವರ ಈ ನಿರ್ಧಾರ ಅತೀ ಮಹತ್ವದ ಅವಕಾಶವಾಗಿದೆ. ನಿರುದ್ಯೋಗ ಸಮಸ್ಯೆಗೆ ಸಹಾಯ ಆಗಲಿದೆ ಎಂದು ರಾಜ್ಯ ಕಾರ್ಮಿಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ಸರಕಾರವನ್ನು ಅಭಿನಂದಿಸಿದ್ದಾರೆ.

Related Articles