ಸುಳ್ಯ – ಕೆ.ಜೆ.ಯು., ಗಾಂಧಿ ಚಿಂತನ ವೇದಿಕೆಯ ವತಿಯಿಂದ ಡಾ.ಕೆವಿಜಿ ಅವರ 8 ನೇ ವರ್ಷದ ಪುಣ್ಯಸ್ಮರಣೆ…

ಸುಳ್ಯ: ಸುಳ್ಯ ತಾಲೂಕು ಕರ್ನಾಟಕ ಜರ್ನಲಿಸ್ಟ್‌ ಯೂನಿಯನ್‌ ಮತ್ತು ಗಾಂಧಿ ಚಿಂತನ ವೇದಿಕೆಯ ವತಿಯಿಂದ ಡಾ.ಕುರುಂಜಿ
ವೆಂಕಟ್ರಮಣ ಗೌಡ ರವರ 8 ನೇ ವರ್ಷದ ಪುಣ್ಯಸ್ಮರಣೆಯ ಪ್ರಯುಕ್ತ ಸುಳ್ಯ ಖಾಸಗಿ ಬಸ್‌ ನಿಲ್ದಾಣದಲ್ಲಿರುವ
ಡಾ.ಕುರುಂಜಿಯವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಆಶ್ರುತರ್ಪಣೆ ಅರ್ಪಿಸಲಾಯಿತು.
ಕೆ.ಜೆ ಯು. ನ ಜಿಲ್ಲಾಧ್ಯಕ್ಷ ಹರೀಶ್‌ ಬಂಟ್ವಾಳ್‌ ರವರು ಮಾಲಾರ್ಪಣೆಗೈದು ನುಡಿನಮನ ಸಲ್ಲಿಸಿದರು.
ಸುಳ್ಯ ಕೆ.ಜೆ ಯು. ಅಧ್ಯಕ್ಷ ಜೆ.ಕೆ ರೈ,ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ಕೃಷ್ಣ
ಬೆಟ್ಟ, ಕೆ.ಜೆ.ಯು. ಜಿಲ್ಲಾ ಜತೆ ಕಾರ್ಯದರ್ಶಿ ಈಶ್ವರ ವಾರಣಾಸಿ, ಕೆ.ಜೆ.ಯು ಉಪಾಧ್ಯಕ್ಷ ರಮೇಶ್‌ ನೀರಬಿದಿರೆ, ಕಾರ್ಯದರ್ಶಿ
ಶಿವಪ್ರಸಾದ್‌ ಆಲೆಟ್ಟಿ, ಖಜಾಂಜಿ ಶಿವರಾಮ ಕಜೆಮೂಲೆ, ಸದಸ್ಯರಾದ ವೆಂಕಟೇಶ್‌ ಮೇನಾಲ, ವಿನೀತಾ ಕಲ್ಲುಗುಂಡಿ
ಮತ್ತಿತರರು ಉಪಸ್ಥಿತರಿದ್ದರು.

Related Articles

Back to top button