ದಾಖಲೆಯ ಕಡಿಮೆ ಅವಧಿಯಲ್ಲಿ ಗುರುಪುರ ಸೇತುವೆ ನಿರ್ಮಾಣ – ಸಂಸದ ನಳಿನ್ ಕುಮಾರ್ ಕಾರ್ಯ ಶ್ಲಾಘನೀಯ…
ಮಂಗಳೂರು: ಗುರುಪುರದಲ್ಲಿ ಕಳೆದ ವರ್ಷ ಫೆಬ್ರವರಿ 2ರಂದು ಸಂಸದ ನಳಿನ್ ಕುಮಾರ್ ಅವರಿಂದ ಶಿಲಾನ್ಯಾಸಗೊಂಡಿದ್ದ ಫಲ್ಗುಣಿ ನದಿಗೆ ಅಡ್ಡಲಾಗಿ, ಹಳೆಯ ಸೇತುವೆಗೆ ಪರ್ಯಾಯವಾಗಿ ನಿರ್ಮಾಣ ಕಾರ್ಯ ಆರಂಭಗೊಂಡಿದ್ದ ಹೊಸ ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ಸದ್ಯ ಉದ್ಘಾಟನೆಗೆ ಕ್ಷಣಗಣನೆ ಎಣಿಸುತ್ತಿದೆ.
ಒಟ್ಟು 39.420 ಕೋಟಿ ರೂ ವೆಚ್ಚದ ಕಾಮಗಾರಿ ಇದಾಗಿದೆ. 175 ಮೀಟರ್ ಉದ್ದದ ಹೊಸ ಸೇತುವೆಯಲ್ಲಿ ಏಳು ಪಿಲ್ಲರ್ ಗಳು ಇದ್ದರೆ, ಒಟ್ಟು 16 ಮೀಟರ್ ಅಗಲದ ಸೇತುವೆಯ 10 ಮೀಟರ್ ಭಾಗದಲ್ಲಿ ವಾಹನ ಸಂಚಾರಕ್ಕೆ ಅವಕಾಶವಿದೆ. ಎರಡೂ ಪಾಶ್ವದಲ್ಲಿ ಮೂರು ಮೀಟರ್ ಅಂತರದ ಕಾಲುದಾರಿ ಒಳಗೊಂಡಿದ್ದರೆ, ಎರಡು ಕೊನೆಯಲ್ಲಿ ತಲಾ 500 ಮೀಟರ್ ಉದ್ದದ ಕೂಡುರಸ್ತೆ ನಿರ್ಮಾಣಗೊಂಡಿದೆ. ಸರ್ಕಾರ ಎರಡು ವರ್ಷದ ಗಡುವು ನೀಡಿದ್ದರೂ, ಕೊರೊನಾ ಲಾಕ್‍ಡೌನ್ ಮುಂದುವರಿದಿರುವ ಹೊರತಾಗಿಯೂ ಹೊಸ ಸೇತುವೆ ಒಂದು ವರ್ಷ ನಾಲ್ಕು ತಿಂಗಳಲ್ಲೇ ಸಿದ್ಧಗೊಂಡಿದೆ.
ರಾಷ್ಟ್ರೀಯ ಹೆದ್ದಾರಿಗೆ(169) ತಿಲಕಪ್ರಾಯದಂತಿರುವ ಗುರುಪುರ ಸೇತುವೆ ಲೋಕಾರ್ಪಣೆಗೊಳ್ಳುತ್ತಲೇ, ಅಗಲ ಕಿರಿದಾದ ಹಳೆಯ ಸೇತುವೆಯಲ್ಲಿ ಪ್ರತಿನಿತ್ಯ ನಡೆಯುತ್ತಿದ್ದ ಟ್ರಾಫಿಕ್ ಜ್ಯಾಂ ಕಡಿಮೆಯಾಗಲಿದೆ. ಎರಡು ಕಡೆಯಲ್ಲಿ ನಿರ್ಮಿಸಲಾದ ತಲಾ 500 ಮೀಟರ್ ಉದ್ದದ ವಿಶಾಲ ಕೂಡುರಸ್ತೆಯಲ್ಲಿ ಮೂರು ಬೃಹತ್ ಮೋರಿ ಅಳವಡಿಸಲಾಗಿದ್ದು, ಪ್ರವಾಹ ನೀರು ಸರಾಗವಾಗಿ ಹರಿದಾಡಲಿದೆ.
ಕರಾವಳಿಯ ಇತಿಹಾಸದಲ್ಲಿಯೇ ಕಾಮಗಾರಿ ಮುಕ್ತಾಯದ ದಿನಾಂಕಕ್ಕೆ ಇನ್ನೂ ಒಂದು ವರ್ಷ ಇರುವಾಗಲೇ ಕಾಮಗಾರಿ ಪೂರ್ಣಗೊಳ್ಳುತ್ತಿರುವುದು ಇದೇ ಮೊದಲು. ಇಂತಹದ್ದೊಂದು ಸಾಧನೆಯನ್ನ ಮಾಡಿರುವುದು ಸಂಸದ ನಳಿನ್ ಕುಮಾರ್ ಕಟೀಲ್.
ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಕಾಮಗಾರಿ ಪೂರ್ಣಗೊಳ್ಳುವುದಕ್ಕೆ ತೆಗೆದುಕೊಂಡಿರುವ ಅವಧಿ. ಸೇತುವೆ ಕೆಲಸಕ್ಕೆ 2ವರ್ಷಗಳ ಕಾಲ ಗಡುವು ನೀಡಲಾಗಿತ್ತು. 2019ರ ಫೆಬ್ರವರಿಯಲ್ಲಿ ಈ ಕಾಮಗಾರಿಯನ್ನ ಪ್ರಾರಂಭಿಸಿಲಾಗಿತ್ತು, ಟೆಂಡರ್ ಕರಾರಿನಂತೆ ಕಾಮಗಾರಿ ಮುಕ್ತಾಯ ದಿನಾಂಕ 2021 ಪೆಬ್ರವರಿ. ಆದರೆ ಸುಮಾರು 9 ತಿಂಗಳ ಮೊದಲೇ ಕಾಮಗಾರಿ ಪೂರ್ಣಗೊಂಡಿರುವುದು ಪ್ರತಿಯೊಬ್ಬರೂ ಮೆಚ್ಚುವಂತಾದ್ದು.
ಈ ಕಾಮಗಾರಿಯ ಗುತ್ತಿಗೆ ಪಡೆದಿರುವವರು ಕರಾವಳಿಯ ಪ್ರಮುಖ ಗುತ್ತಿಗೆದಾರರಾಗಿರೋ ಡಿ. ಸುಧಾಕರ್ ಶೆಟ್ಟಿ, ಮುಗ್ರೋಡಿಕನ್ಸ್ ಟ್ರಕ್ಷನ್ಸ್. ದಾಖಲೆಯ ಅವಧಿಯಲ್ಲಿ ಸೇತುವೆ ಕಾಮಗಾರಿ ಮುಗಿಸಿರುವ ಮುಗ್ರೋಡಿ ಕನ್ಸ್ ಟ್ರಕ್ಷನ್ಸ್ ಕೂಡ ಈಗ ಕರಾವಳಿಯಾದ್ಯಂತ ಹೆಸರು ಮಾಡುತ್ತಿದೆ.
ಗುರುಪುರ ಸೇತುವೆ ನಿರ್ಮಾಣ ಕಾರ್ಯ ಸಂಪೂರ್ಣವಾಗಿದ್ದು, ಉದ್ಘಾಟನೆಯ ದಿನಾಂಕ ನಿಗದಿಯಾಗಬೇಕಾಗಿದೆ.