ಕಬಕ ಸರಕಾರಿ ಪ್ರೌಢಶಾಲೆಯಲ್ಲಿ ಅಬ್ಬಕ್ಕರಾಣಿ ಗೈಡ್ಸ್ ದಳದ ವತಿಯಿಂದ ಉಚಿತ ಮಾಸ್ಕ್ ವಿತರಣೆ…
ಪುತ್ತೂರು: ಕೊರೋನದ ಬಗ್ಗೆ ಭಯಬೇಡ, ಎಚ್ಚರಿಕೆಯಿಂದಿರಬೇಕು.ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಹಾಗೆಯೇ ಸರಕಾರದ ಆದೇಶಗಳನ್ನು ಪಾಲಿಸುವುದರ ಮೂಲಕ ಆರೋಗ್ಯ ನಿಯಮಗಳನ್ನು ಪಾಲಿಸಿ ಕೊರೋನ ಮುಕ್ತ ಭಾರತ ಮಾಡಬಹುದು ಎಂದು ಸಾಮಾಜಿಕ ಮುಖಂಡ ಎಸ್.ಡಿ ಎಂ.ಸಿ ಕಾರ್ಯಾಧ್ಯಕ್ಷ ಪುರುಷೋತ್ತಮ ಮುಂಗ್ಲಿಮನೆ ಹೇಳಿದ್ದಾರೆ.
ಅವರು ಸರಕಾರಿ ಪ್ರೌಢಶಾಲೆ ಕಬಕದಲ್ಲಿ ಅಬ್ಬಕ್ಕರಾಣಿ ಗೈಡ್ಸ್ ದಳದ ವತಿಯಿಂದ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಕಬಕ ನೇತ್ರಾವತಿ ಜ್ಞಾನವಿಕಾಸ ಕೇಂದ್ರದ ಸದಸ್ಯರಿಗೆ ಉಚಿತ ಮಾಸ್ಕ್ ವಿತರಣಾ ಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದರು.
ಕಬಕ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಭಾನುಮತಿ ,ಗೈಡ್ಸ್ ಶಿಕ್ಷಕಿ ಶಾಂತ ಪ್ರಾಯೋಜಕತ್ವ ವಹಿಸಿದ 60 ಮಾಸ್ಕ್ ಗಳನ್ನು ಶ್ರೀ.ಧ.ಗ್ರಾ.ಯೋಜನೆ ಪುತ್ತೂರು ವಲಯ ಮೇಲ್ವಿಚಾರಕರಾದ ಶ್ರೀಮತಿ ಪಾವನ ಇವರಿಗೆ ಹಸ್ತಾಂತರಿಸಿದರು.
ಶ್ರೀ.ಧ.ಗ್ರಾ.ಯೋಜನೆ ಪುತ್ತೂರು ತಾಲೂಕಿನ ಜ್ಞಾನವಿಕಾಸ ಸಮನ್ವಯಾಧಿಕಾರಿ ಸುಜಾತ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಪ್ರಭಾರ ಮುಖ್ಯ ಶಿಕ್ಷಕಿ ರಮ್ಯ ಮಾಸ್ಕ್ ದಿನಾಚರಣಿ ಪ್ರತಿಜ್ಞಾವಿಧಿ ಬೋಧಿಸಿದರು.ಕಬಕ ನೇತ್ರಾವತಿ ಜ್ಞಾನವಿಕಾಸ ಕೇಂದ್ರದ ಸೇವಾ ಪ್ರತಿನಿಧಿ ಶ್ರೀಮತಿ ಪದ್ಮಾವತಿ ಕಾರ್ಯಕ್ರಮದ ಬಗ್ಗೆ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ನೇತ್ರಾವತಿ ಜ್ಞಾನವಿಕಾಸ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು. ವಿಜ್ಞಾನ ಶಿಕ್ಷಕಿ ಇಂದಿರಾ ಕೆ. ಸ್ವಾಗತಿಸಿದರು.ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣಯ್ಯ.ಕೆ.ಧನ್ಯವಾದವಿತ್ತರು.ಗೈಡ್ಸ್ ಶಿಕ್ಷಕಿ ಶಾಂತ ಸ್ವರಚಿತ ಕೊರೋನ ಜಾಗೃತಿ ಗೀತೆ ಹಾಡುವುದರೊಂದಿಗೆ ಕಾರ್ಯಕ್ರಮ ನಿರ್ವಹಿಸಿದರು.ಸಮಾಜವಿಜ್ಞಾನ ಶಿಕ್ಷಕ ಸತ್ಯಶಂಕರ.ಎಂ.ಸಹಕರಿಸಿದರು.