ಮಂಗಳೂರು – ಐವರು ವೈದ್ಯರಿಗೆ ಕೊರೊನಾ ಪಾಸಿಟಿವ್ ???…

ಮಂಗಳೂರು: ನಗರದ ಎರಡು ಸರ್ಕಾರಿ ಆಸ್ಪತ್ರೆಗಳ ಮೂವರು, ಖಾಸಗಿ ಆಸ್ಪತ್ರೆಯ ಇಬ್ಬರು ವೈದ್ಯರಿಗೆ ಕೊರೊನಾ ದೃಢಪಟ್ಟಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಸೋಂಕಿತರಲ್ಲಿ 28 ವರ್ಷದ ವೈದ್ಯ, 28 ವರ್ಷದ ಇಬ್ಬರು ವೈದ್ಯೆಯರು, 27 ವರ್ಷದ ಇಬ್ಬರು ವೈದ್ಯೆಯರು ಸೇರಿದ್ದಾರೆ ಎನ್ನಲಾಗಿದೆ.ಪಾಸಿಟಿವ್ ಕಂಡುಬಂದ ಎಲ್ಲಾ ವೈದ್ಯರು ನಗರದ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದವರು ಎಂದು ತಿಳಿದು ಬಂದಿದೆ. ಇವರ ಸಂಪರ್ಕದಲ್ಲಿದ್ದ 30 ವೈದ್ಯರನ್ನು ಕ್ವಾರಂಟೈನ್‌ಗೊಳಪಡಿಸಲಾಗಿದೆ.
ನಗರದ ಖಾಸಗಿ ಆಸ್ಪತ್ರೆಗೆ ಇತ್ತೀಚೆಗೆ ಬೇರೆ ಚಿಕಿತ್ಸೆಗಾಗಿ ಬಂದಿದ್ದ ರೋಗಿಗೆ ಪಾಸಿಟಿವ್ ಬಂದಿದ್ದು ರೋಗಿಗೆ ಚಿಕಿತ್ಸೆ ನೀಡಿದ ವೈದ್ಯರನ್ನು ಕೂಡಾ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.