ಮಂಗಳವಾರ – ದ.ಕ 44 ,ಉಡುಪಿ 9 ಹಾಗೂ ರಾಜ್ಯದಲ್ಲಿ 947 ಕೊರೋನ ಪಾಸಿಟಿವ್ ಪತ್ತೆ…

ಮಂಗಳೂರು: ಇಂದು(ಮಂಗಳವಾರ) ದ.ಕ ಜಿಲ್ಲೆಯಲ್ಲಿ 44 ಹಾಗೂ ಉಡುಪಿ ಜಿಲ್ಲೆಯಲ್ಲಿ 9 ಹಾಗೂ ರಾಜ್ಯದಲ್ಲಿ 947 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.
ದ.ಕ ಜಿಲ್ಲೆಯಲ್ಲಿ ಇಂದು 10 ವೈದ್ಯರಿಗೆ ಕೊರೊನಾ ಪಾಸಿಟಿವ್‌‌‌ ದೃಢಪಟ್ಟಿದೆ.ಕೊರೊನಾ ಆಸ್ಪತ್ರೆಯ ಮುಖ್ಯ ವೈದ್ಯರೊಬ್ಬರಿಗೆ ಹಾಗೂ ಕೊರೊನಾ ವಿಭಾಗದ ಮುಖ್ಯಸ್ಥರಿಗೆ ಕೊರೊನಾ ಪಾಸಿಟಿವ್‌ ವರದಿಯಾಗಿದೆ.ಕೊರೊನಾ ಆಸ್ಪತ್ರೆಯ ಹಲವು ವೈದ್ಯರಿಗೆ ಕೊರೊನಾ ಪಾಸಿಟಿವ್‌‌ ವರದಿಯಾಗಿದೆ.ಉಳ್ಳಾಲದಲ್ಲಿ ಮಂಗಳವಾರದಂದು ಒಟ್ಟು 12 ಮಂದಿಯಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಉಳ್ಳಾಲದಲ್ಲಿ ನಡೆದ ಮೊದಲ ಕೊರೊನಾ ಮೃತ ಆಝಾದ್ ನಗರದ ಮಹಿಳೆಯ ಮನೆಯ 7 ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಉಳ್ಳಾಲ ಸ್ವೀಟ್ಸ್ ಅಂಗಡಿ ಮಾಲೀಕನಲ್ಲೂ ಸೋಂಕು ಇರುವುದು ದೃಢಪಟ್ಟಿದೆ. ಇನ್ನು ಮಂಜನಾಡಿ ಕಲ್ಕಟ್ಟ ನಿವಾಸಿಯಲ್ಲೂ ಸೋಂಕು ಇರುವುದು ತಿಳಿದು ಬಂದಿದೆ. ಖಾಸಗಿ ಲ್ಯಾಬ್ ಒಂದರ ಟೆಕ್ನೀಶಿಯನ್ ಒಬ್ಬರಲ್ಲೂ ಸೋಂಕು ಇರುವುದು ಪತ್ತೆಯಾಗಿದೆ.
ಉಡುಪಿ ಜಿಲ್ಲೆಯಲ್ಲಿ ಕೋರೋಣ ಸೋಂಕಿಗೆ ಮೂರನೇ ಬಲಿಯಾಗಿದ್ದು ಬೈಂದೂರು ತಾಲೂಕಿನ 48 ವರ್ಷದ ವ್ಯಕ್ತಿ ಸಾವನಪ್ಪಿದ್ದಾರೆ. ಮೃತ ವ್ಯಕ್ತಿ ಬಹುವಿಧದ ಖಾಯಿಲೆಯಿಂದ ಬಳಲುತ್ತಿದ್ದು, ಶನಿವಾರ ಮುಂಬೈನಿಂದ ತವರಿಗೆ ವಾಪಾಸಾಗಿದ್ದು ಭಾನುವಾರ ತನ್ನ ಸ್ವಗ್ರಾಮ ಕಾಲ್ತೋಡಿನಲ್ಲಿ ಮೃತಪಟ್ಟಿದ್ದರು. ಮೃತ ವ್ಯಕ್ತಿ ಮಹಾರಾಷ್ಟ್ರದಿಂದ ವಾಪಾಸಾಗಿದ್ದರಿಂದ ಅವರ ಗಂಟಲ ದ್ರವ ಪರೀಕ್ಷೆ ಮಾಡಿದ್ದು ಅದರ ವರದಿ ಮಂಗಳವಾರ ಬಂದಿದ್ದು ಅವರಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿದೆ.
ಇನ್ನು ರಾಜ್ಯದಲ್ಲಿ ಹೊಸದಾಗಿ 947 ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದ್ದು, ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 15242ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರದಲ್ಲಿ 503, ಬಳ್ಳಾರಿಯಲ್ಲಿ 61, ಹಾವೇರಿಯಲ್ಲಿ 49, ದಕ್ಷಿಣ ಕನ್ನಡದಲ್ಲಿ 44, ಉತ್ತರಕನ್ನಡದಲ್ಲಿ 40, ವಿಜಯಪುರದಲ್ಲಿ 39, ಶಿವಮೊಗ್ಗದಲ್ಲಿ 22, ಬೆಂಗಳೂರು ಗ್ರಾಮಾಂತರದಲ್ಲಿ 21, ಬೀದರ್‌,ಧಾರವಾಡದಲ್ಲಿ ತಲಾ17, ಹಾಸನದಲ್ಲಿ 16, ರಾಯಚೂರು, ಚಿಕ್ಕಬಳ್ಳಾಪುರ, ದಾವಣಗೆರೆ, ರಾಮನಗರದಲ್ಲಿ ತಲಾ 12, ಚಿಕ್ಕಮಗಳೂರಿನಲ್ಲಿ 10, ಉಡುಪಿ, ಮೈಸೂರಿನಲ್ಲಿ ತಲಾ 9, ಬಾಗಲಕೋಟೆ, ಕೊಡಗಿನಲ್ಲಿ ತಲಾ 4, ಕೋಲಾರ, ಚಿತ್ರದುರ್ಗದಲ್ಲಿ ತಲಾ 3, ಯಾದಗಿರಿ, ಮಂಡ್ಯ, ಬೆಳಗಾವಿ, ಗದಗದಲ್ಲಿ ತಲಾ 2, ತುಮಕೂರಿನಲ್ಲಿ 1 ಪ್ರಕರಣಗಳು ವರದಿಯಾಗಿವೆ.

Sponsors

Related Articles

Leave a Reply

Your email address will not be published. Required fields are marked *

Back to top button