ಡಾ.ಗಿರಿಧರ್ ಕಜೆ ಯವರ ಆಯುರ್ವೇದಿಕ್ ಔಷಧಿ ಹಾಗೂ ಕೆಲವು ಮನೆ ಮದ್ದುಗಳಿಂದ ಕೊರೋನಾದಿಂದ ಗುಣಮುಖ- ಸಿ ಟಿ ರವಿ…
ಬೆಂಗಳೂರು: ಡಾ. ಗಿರಿಧರ್ ಕಜೆಯವರ ಆಯುರ್ವೇದ ಔಷಧಿ ಹಾಗೂ ಕೆಲವು ಮನೆ ಮದ್ದುಗಳಿಂದ ಕೊರೋನಾದಿಂದ ಗುಣಮುಖನಾಗಿ ಕರ್ತವ್ಯಕ್ಕೆ ಹಾಜರಾಗಿದ್ದೇನೆ ಅಂತ ಪ್ರವಾಸೋದ್ಯಮ ಸಚಿವ ಸಿ ಟಿ ರವಿ ತಿಳಿಸಿದ್ದಾರೆ.
ಡಾ. ಗಿರಿಧರ ಕಜೆಯವರ ಔಷಧಿ ತೆಗೆದುಕೊಳ್ಳುತ್ತಿದ್ದೆ. ಜೊತೆಗೆ ವ್ಯಾಯಾಮ ಹಾಗೂ ಪ್ರಾಣಾಯಾಮ ಮಾಡುತ್ತಿದ್ದೆ.ಕೊರೋನಾ ರೋಗಿಗಳಿಗೆ ಪ್ರೀತಿಯ ಅವಶ್ಯಕತೆ ತುಂಬಾ ಇದೆ. ಪ್ರೀತಿ ವಿಶ್ವಾಸ ಇದ್ರೆ ಕೊರೋನಾವನ್ನು ಸುಲಭವಾಗಿ ಗೆಲ್ಲಬಹದು. ಬೇರೆ ಕಾಯಿಲೆಗಳಿಂದ ಬಳಲುವವರು ಕೊರೋನಾವನ್ನು ಧೈರ್ಯದಿಂದ ಎದುರಿಸಬೇಕು ಎಂದ ಅವರು ಮನೆ ಊಟ, ಪ್ರೀತಿ- ವಿಶ್ವಾಸ, ಕಜೆಯವರ ಔಷಧಿಯಿಂದ ಕೊರೋನಾ ಗೆದ್ದೆ ಎಂದು ತಿಳಿಸಿದ್ದಾರೆ.