ಸುಳ್ಯ – ಕೊರೋನಾ ಸೋಂಕಿಗೆ ನಾಲ್ಕನೇ ಬಲಿ…

ಸುಳ್ಯ: ಕೊರೋನಾ ಸೋಂಕಿಗೆ ನಿನ್ನೆ ರಾತ್ರಿ ಸುಳ್ಯದ ಮಹಿಳೆಯೊಬ್ಬರು ಮೃತಪಟ್ಟಿದ್ದು, ತಾಲೂಕಿನಲ್ಲಿ ಒಟ್ಟು 4 ಮಂದಿ ಕೊರೋನಾಗೆ ಬಲಿಯಾದಂತಾಗಿದೆ.
ಕಲ್ಲುಮುಟ್ಲು ನಿವಾಸಿಯಾದ 61 ವರ್ಷ ಪ್ರಾಯದ ಮಹಿಳೆಯೊಬ್ಬರು ಕೊರೋನಾಗೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಮಂಗಳೂರಿನ ಖಾಸಗಿ ಆಸ್ಪತ್ರೆ ಯಲ್ಲಿ ನಿನ್ನೆ ರಾತ್ರಿ ಕೊನೆಯುಸಿರೆಳೆದರು.ಇವರು ಕೆಲವು ದಿನಗಳ ಹಿಂದೆ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆ ಗೆ ದಾಖಲಾಗಿದ್ದರು.
ನಿನ್ನೆ ಒಂದೇ ದಿನ ತಾಲೂಕಿನ 9 ಮಂದಿಗೆ ಕೊರೊನಾ ಪಾಸಿಟಿವ್ ಆಗಿದ್ದು, ತಾಲೂಕಿನಲ್ಲಿ ಕೊರೋನಾ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲಿದೆ.