ಸುಳ್ಯ ರೋಟರಿ ವತಿಯಿಂದ ಅಡ್ಕಾರಿನ ಸುಬ್ರಹ್ಮಣ್ಯ ದೇವಸ್ಥಾನದ ಆವರಣದಲ್ಲಿ ವನಮಹೋತ್ಸವ…

ಸುಳ್ಯ: ರೋಟರಿ ಕ್ಲಬ್ ಸುಳ್ಯ ಹಾಗೂ ರೋಟರಿ ಸುಳ್ಯ ಸಿಟಿ ಇದರ ವತಿಯಿಂದ ಅಡ್ಕಾರಿನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಆವರಣದಲ್ಲಿ ಔಷಧಿ ಮತ್ತು ಹಣ್ಣಿನ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ರೋಟರಿ ಸುಳ್ಯ ಸಿಟಿ ಇದರ ಅಧ್ಯಕ್ಷರಾದ ರೊl ಗುರು ವಿಕ್ರಂ, ರೋಟರಿ ಸುಳ್ಯದ ಕಾರ್ಯದರ್ಶಿ ರೊl ಲತಾ ಮಧುಸೂದನ್, ರೊl ಭಾನುಪ್ರಕಾಶ್, ರೊl ಮಧುಸೂದನ್,ರೊl ಲಿಂಗಪ್ಪ ಗೌಡ,ರೊl ರಮಾ ವೈ.ಕೆ, ರೊl ಮಹಾಲಕ್ಷ್ಮಿ ಕೊರಂಬಡ್ಕ,ರೊl ಗಿರೀಶ್ ನಾರ್ಕೋಡು, ರೊl ಹೇಮಂತ್ ಕಾಮತ್,ರೊl ಗೌತಮ್ ಭಟ್,ರೊlಅಭಿನಂದನ್ ಜೈನ್, ಹಾಗು ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಗುರುರಾಜ್ ಮೊದಲಾದವರು ಉಪಸ್ಥಿತರಿದ್ದರು.
ಕಸ್ತೂರಿ ನರ್ಸರಿ ಮಾಲೀಕರಾದ ರೊl ಮಧುಸೂದನ್ ಇವರು ಉಚಿತವಾಗಿ ಉತ್ತಮ ತಳಿಯ ಗಿಡಗಳನ್ನು ನೀಡಿ ಸಹಕರಿಸಿದರು. ಇದೇ ಸಂದರ್ಭದಲ್ಲಿ ರೋಟರಿ ಸುಳ್ಯ ಸಿಟಿ ಇವರ ವತಿಯಿಂದ ಕಸದ ತೊಟ್ಟಿಯನ್ನು ದೇವಾಲಯಕ್ಕೆ ನೀಡಲಾಯಿತು.

IMG 20200808 WA0017 300x142

Related Articles

Leave a Reply

Your email address will not be published. Required fields are marked *