ಫೈಬರ್ ದೋಟಿ ಕೌಶಲ್ಯ ತರಬೇತಿ ಕಾರ್ಯಕ್ರಮ…
ಬಂಟ್ವಾಳ : ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ನಿಯಮಿತ ಇದರ ವತಿಯಿಂದ ಫೈಬರ್ ದೋಟಿ ಕೌಶಲ್ಯ ತರಬೇತಿ ಕಾರ್ಯಕ್ರಮದ ಉದ್ಘಾಟನೆಯು ಫೆ.28 ರಂದು ಪಿಂಗಾರ ಕಂಪೆನಿಯ ಅಧ್ಯಕ್ಷ ರಾಮಕಿಶೋರ್ ಮಂಚಿ ಇವರ ತೋಟದಲ್ಲಿ ಜರಗಿತು.
ಸಮಾರಂಭದ ಅಧ್ಯಕ್ಷತೆಯನ್ನು ಶಿವರಾಮ ಭಟ್ ಕಜೆ ವಹಿಸಿದ್ದರು. ಕ್ಯಾಂಪ್ಕೋ ಉಪಾಧ್ಯಕ್ಷ ಶಂನಾ ಖಂಡಿಗೆ ದೀಪ ಬೆಳಗಿಸಿ ಉದ್ಘಾಟಿಸಿದರು.
ಕ್ಯಾಂಪ್ಕೋ ಕಂಪೆನಿಯ ನಿಕಟಪೂರ್ವ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಕಂಪೆನಿಗೆ ಶುಭ ಹಾರೈಸಿದರು. ಕಂಪೆನಿಯ ಅಧ್ಯಕ್ಷ ರಾಮ ಕಿಶೋರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಕ್ಯಾಂಪ್ಕೋ ನಿರ್ದೇಶಕರಾದ ಪದ್ಮರಾಜ ಪಟ್ಟಾಜೆ , ಪಿಂಗಾರ ಕಂಪೆನಿಯ ನಿರ್ದೇಶಕರಾದ ಪುಷ್ಪಾ ಎಸ್. ಕಾಮತ್, ಕೃಷ್ಣಮೂರ್ತಿ ಕಟ್ಟೆ, ರಮೇಶ್ ಎನ್., ಜಯರಾಮ ರೈ ಬೊಳಂತೂರು, ದಿವಾಕರ ನಾಯಕ್, ವಿಶ್ವನಾಥ ನಾಯ್ಕ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರದೀಪ್ ಎಸ್, ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಶ್ರೀ ಪಡ್ರೆ ಹಾಗೂ ಪಿಂಗಾರ ಕಂಪೆನಿಯ ಸದಸ್ಯರು ಉಪಸ್ಥಿತರಿದ್ದರು.
ಒಟ್ಟು 16 ಶಿಬಿರಾರ್ಥಿಗಳು ಭಾಗವಹಿಸಿ ತರಬೇತಿ ಪಡೆದರು.
ಫೈಬರ್ ದೋಟಿ ಕೌಶಲ್ಯ ತರಬೇತಿ ಕಾರ್ಯಕ್ರಮದ ಪ್ರಾತ್ಯಕ್ಷಿಕೆಯು ಜರಗಿತು. ಬೆಂಗಳೂರಿನ ಬಾಲಸುಬ್ರಹ್ಮಣ್ಯ ಇವರು ಫೈಬರ್ ದೋಟಿಯ ಬಗ್ಗೆ ರೈತರಿಗೆ ಉಪಯುಕ್ತ ಮಾಹಿತಿ ನೀಡಿದರು. ಪಿಂಗಾರ ಕಂಪೆನಿಯ ದೋಟಿ ಕೌಶಲ್ಯ ಪಡೆಯ ಶಿಬಿರಾರ್ಥಿಗಳು ಪ್ರಾತ್ಯಕ್ಷಿಕೆ ನೀಡಿದರು.
ಪಿಂಗಾರ ಕಂಪೆನಿ ಅಧ್ಯಕ್ಷ ರಾಮ್‍ಕಿಶೋರ್ ಪ್ರಸ್ತಾವನೆ ನೀಡಿ ಸ್ವಾಗತಿಸಿದರು. ರಮೇಶ್ ಎನ್. ವಂದಿಸಿದರು.