ಕೊಡಂಗಲ್ಲು ವೇಣುಗೋಪಾಲ ಕಾಲೋನಿ ವೆಲ್ಫೇರ್ ಅಸೋಸಿಯೇಷನ್-15ನೇ ವಾರ್ಷಿಕೋತ್ಸವ…

ಮೂಡುಬಿದಿರೆ: ಕೊಡಂಗಲ್ಲು ವೇಣುಗೋಪಾಲ ಕಾಲೋನಿ ವೆಲ್ಫೇರ್ ಅಸೋಸಿಯೇಷನ್ ಇದರ 15ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ಪುರಸಭಾ ಅಧ್ಯಕ್ಷರಾದ ಶ್ರೀ ಪ್ರಸಾದ್ ಕುಮಾರ್ ವಹಿಸಿದರು.
ಈ ಸಂದರ್ಭದಲ್ಲಿ ಎಂ ಸಿ ಎಸ್ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಬಾಹುಬಲಿ ಪ್ರಸಾದ್, ಪುರಸಭಾ ಸದಸ್ಯರಾದ ಶ್ರೀಮತಿ ಜಯಶ್ರೀ ಕೇಶವ್, ಶ್ರೀಮತಿ ಶ್ವೇತಾ ಪ್ರವೀಣ್, ಸುರೇಶ್ ಕೋಟ್ಯಾನ್, ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷರಾದ ಶಶಿಧರ್ ಶೆಟ್ಟಿ ಹಾಗೂ ಕಾಲೊನಿಯಾ ನಾಗರಿಕರು, ಮಕ್ಕಳು ಮೊದಲಾದವರು ಉಪಸ್ಥಿತರಿದ್ದರು.
