ತೆಂಗು ಸೌಹಾರ್ದ ಸಹಕಾರಿ ಬಂಟ್ವಾಳ – ವಾರ್ಷಿಕ ಮಹಾಸಭೆ,,, ತೆಂಗು ಕೃಷಿಗೆ ಸಹಕಾರಿ ಸಂಸ್ಥೆಯ ಮೂಲಕ ಪ್ರತ್ಯೇಕ ಆದ್ಯತೆ ಶ್ಲಾಘನೀಯ -ಯನ್. ಪ್ರಕಾಶ್ ಕಾರಂತ…
ಬಂಟ್ವಾಳ : ಕರ್ನಾಟಕ ತೆಂಗು ಸೌಹಾರ್ದ ಸಹಕಾರಿ ಬಂಟ್ವಾಳ ಇದರ ವಾರ್ಷಿಕ ಮಹಾಸಭೆ ನ. 10ರಂದು ಬಿ. ಸಿ. ರೋಡ್ ರೋಟರಿ ಸಭಾಂಗಣದಲ್ಲಿ ನಡೆಯಿತು.
ಮಹಾಸಭೆಯಲ್ಲಿ ರೋಟರಿ ಜಿಲ್ಲಾ ನಿಯೋಜಿತ ಗವರ್ನರ್ ರೊ. ಯನ್. ಪ್ರಕಾಶ್ ಕಾರಂತ ತೆಂಗು – ತಾಳೆ ಬೆಳೆ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ಬಳಿಕ ಮಾತನಾಡಿ ತೆಂಗು ಕೃಷಿಯ ಸಹಕಾರಿ ಸಂಸ್ಥೆ ಮಾಡುವ ಮೂಲಕ ಪ್ರತ್ಯೇಕ ಆದ್ಯತೆ ನೀಡುವ ಕೆಲಸ ಶ್ಲಾಘನೀಯ. ತೆಂಗು ಕೃಷಿಯಲ್ಲಿ ಸರ್ವವೂ ಸದ್ಭಳಕೆ ಆಗುತ್ತದೆ. ಅದಕ್ಕಾಗಿ ತೆಂಗಿಗೆ ಕಲ್ಪವೃಕ್ಷ ಎಂದು ಋಷಿಮುನಿಗಳು ಕರೆದಿದ್ದಾರೆ. ತೆಂಗು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಆಗಬೇಕು. ಇಂತಹ ಕೃಷಿ ವಿಚಾರಕ್ಕೆ ರೋಟರಿ ಪೂರ್ಣ ಬೆಂಬಲ ನೀಡುವುದು ಎಂದರು.
ಸಭಾಧ್ಯಕ್ಷೆ ವಹಿಸಿದ್ದ ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ನಾರಾಯಣ ಹೆಗ್ಡೆ ಮಾತನಾಡಿ, ಕೃಷಿ ವಿಚಾರದ ಒಳ್ಳೆಯ ಕೆಲಸಕ್ಕೆ ನಮ್ಮ ಬೆಂಬಲ ಇದೆ ಎಂದರು. ಕ್ಲಬ್ ಕಾರ್ಯದರ್ಶಿ ವಾಣಿ ಕಾರಂತ್ ಉಪಸ್ಥಿತರಿದ್ದರು.
ತೆಂಗು ಸೌಹಾರ್ದ ಸಹಕಾರಿಯ ಅಧ್ಯಕ್ಷ ರಾಜಾ ಬಂಟ್ವಾಳ್ ಮಹಾಸಭೆ ಅಧ್ಯಕ್ಷತೆ ವಹಿಸಿದ್ದರು.
ನಿರ್ದೇಶಕರಾದ ಸದಾಶಿವ ಬಂಗುಲೆ, ವಿಠ್ಠಲ ಬಂಗುಲೆ, ನಾಗೇಶ್ ಕಲ್ಯಾರ್, ಪ್ರೇಮನಾಥ ಶೆಟ್ಟಿ, ಶರಣಪ್ಪ ಉಮರಗಿ, ಶಶಿಕಲಾಕೃಷ್ಣ, ಅಂಬಿಕಾ ಹರೀಶ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಹರ್ಷಿತ್ ಕುಮಾರ್ ಪ್ರಸ್ತಾವನೆ ನೀಡಿ ವರದಿ ವಾಚಿಸಿದರು. ಉಪಾಧ್ಯಕ್ಷ ಜಯಾನಂದ ಪೆರಾಜೆ ಪ್ರಾರ್ಥಿಸಿ, ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಮಾಹಿತಿ ಶಿಬಿರದಲ್ಲಿ ಸಿಪಿಸಿಆರ್‍ಐ ವಿಜ್ಞಾನಿ ಡಾ. ಮಹೇಶ್ವರಪ್ಪ ಪ್ರೊಜೆಕ್ಟರ್ ಮೂಲಕ ತೆಂಗು, ತಾಳೆ ಬೆಳೆ ಸಮಗ್ರ ಮಾಹಿತಿ ನೀಡಿದರು. ಬಂಟ್ವಾಳ ತೋಟಗಾರಿಕೆ ಹಿರಿಯ ನಿರ್ದೇಶಕ ಪ್ರದೀಪ್ ಡಿಸೋಜಾ ಸಮಗ್ರ ಕೃಷಿ ಮಾಹಿತಿಯನ್ನು ನೀಡಿ, ಸಂವಾದ ನಡೆಸಿಕೊಟ್ಟರು. ಡ್ರಿಪ್ಸ್ ಸಾಮಗ್ರಿಗಳ ಪ್ರದರ್ಶನ, ವಿವಿಧ ತರಕಾರಿ ಬೀಜಗಳ ಮಾರಾಟ ಪ್ರದರ್ಶನ ವ್ಯವಸ್ಥೆ ಮಾಡಲಾಗಿತ್ತು. ಸಮಗ್ರ ಕೃಷಿ ನಿರ್ವಾಹಕ ನಿರಂಜನ ಸೇಮಿತ ಬಡಗಬೆಳ್ಳೂರು ಅವರನ್ನು ವೇದಿಕೆಯಲ್ಲಿ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು.
ಅಪರಾಹ್ನ ಲೊರೆಟ್ಟೊದಲ್ಲಿ ತಾಳೆ ಬೆಳೆ ತೋಟ ಕ್ಷೇತ್ರ ದರ್ಶನ ನಡೆಸಲಾಯಿತು.