ಸುಬ್ರಮಣ್ಯ ದೇವಸ್ಥಾನ ಸಜೀಪಮುನ್ನೂರು ಇದರ ಪ್ರತಿಷ್ಠಾಪನಾ ವರ್ಧಂತಿ…
ಬಂಟ್ವಾಳ: ಮುಗುಳಿಯ ಸುಬ್ರಮಣ್ಯ ದೇವಸ್ಥಾನ ಸಜೀಪಮುನ್ನೂರು ಇದರ ಪ್ರತಿಷ್ಠಾಪನಾ ವರ್ಧಂತಿ ಅಂಗವಾಗಿ ಗುಡಿಗೇರಿ ದೇವರಿಗೆ ಪಂಚಾಮೃತಾಭಿಷೇಕ, ಪವಮಾನ ಸೂಕ್ತ ಅಭಿಷೇಕ, ಗಣಯಾಗ, ನಾಗತಂಬಿಲ, ಅನ್ನದಾನ, ರಾತ್ರಿ ಶ್ರೀ ದೇವರಿಗೆ ರಂಗಪೂಜೆ ಕಲ್ಪೋಕ್ತ ಪೂಜೆ ಫೆ. 26 ರಂದು ನೆರವೇರಿತು.
ವಿವಿಧ ತಂಡಗಳಿಂದ ಭಜನಾ ಸಂಕೀರ್ತನೆ ಮನರಂಜನಾ ಕಾರ್ಯಕ್ರಮದ ಅಂಗವಾಗಿ ರವೀಂದ್ರ ಪ್ರಭು ಮಂಗಳೂರು ತಂಡದವರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ಜರಗಿತು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ವೇದಮೂರ್ತಿ ಶಿವರಾಮ ಮಯ್ಯ ಉದ್ಘಾಟಿಸಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯಶಂಕರ ಬಾಸ್ರಿತಾಯ, ಸುಬ್ರಹ್ಮಣ್ಯ ಭಟ್. ಎಂ. ಏನ್ ಕೆ ಶಿವ, ದೇವಪ್ಪ ಮಡಿವಾಳ, ಹರಿಪ್ರಸಾದ್ ಬಂಡಾರಿ, ಶ್ರೀನಿವಾಸ್ ನಾಯಕ್, ಕೃಷ್ಣಭಟ್, ರಾಜು, ದೀಕ್ಷಿತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.