ಜೂ. 3 ವಿಧಾನ ಪರಿಷತ್ ಚುನಾವಣೆ- ಶಾಸಕರ ಸೂಚನೆ ಯಂತೆ ಬ್ಲಾಕ್ ಅಧ್ಯಕ್ಷರುಗಳ ಮತ್ತು ಉಸ್ತುವಾರಿಗಳ ಸಭೆ…

ಪುತ್ತೂರು:ಕರ್ನಾಟಕ ವಿಧಾನಪರಿಷತ್ ಗೆ ಜೂನ್ 3 ರಂದು ಚುನಾವಣೆ ನಡೆಯಲಿದ್ದು, ನೈಋತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರ ವ್ಯಾಪ್ತಿಯಲ್ಲಿ ದಕ್ಷಿಣಕನ್ನಡ ಜಿಲ್ಲೆಯೂ ಸೇರಿದಂತೆ 5 ಜಿಲ್ಲೆ ಮತ್ತು 3 ತಾಲೂಕು ಗಳನ್ನು ಒಳಗೊಂಡಿದೆ.
ಪದವೀಧರ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಯಾಗಿ ಆಯನೂರು ಮಂಜುನಾಥ್, ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಾ. ಕೆ. ಕೆ. ಮಂಜುನಾಥ್ ಸ್ಪರ್ದಿಸುತ್ತಿದ್ದು, ಜಿಲ್ಲೆಯ ಎಲ್ಲಾ ಬ್ಲಾಕ್ ಗಳಿಗೆ ಡಿಸಿಸಿ ಯಿಂದ ಉಸ್ತುವಾರ ಗಳನ್ನು ನೇಮಿಸಲಾಗಿದೆ. ಪುತ್ತೂರು ಬ್ಲಾಕ್ ಗೆ ಡಿಸಿಸಿ ಉಪಾಧ್ಯಕ್ಷ ಎನ್. ಜಯಪ್ರಕಾಶ್ ರೈ, ಮಾಜಿ ಕೆಪಿಸಿಸಿ ಕಾರ್ಯದರ್ಶಿ ಎಂ. ವೆಂಕಪ್ಪ ಗೌಡ, ಉಪ್ಪಿನoಗಡಿ ಬ್ಲಾಕ್ ಗೆ ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗ ರಾಜ್ಯ ಪ್ರದಾನ ಕಾರ್ಯದರ್ಶಿ ಕೆ. ಎಂ. ಮುಸ್ತಫ, ವಿಜಯಕುಮಾರ್ ಸೊರಕೆ ಇವರನ್ನು ನೇಮಿಸಲಾಗಿರುತ್ತದೆ
ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಯವರು ಮತದಾರರನ್ನು ಸಂಪರ್ಕಿಸುವಂತೆ ನಿರ್ದೇಶನ ನೀಡಿದ ಮೇರೆಗೆ ಪುತ್ತೂರು ಬ್ಲಾಕ್ ಅಧ್ಯಕ್ಷರಾದ ಎಂ. ಬಿ. ವಿಶ್ವನಾಥ್ ರೈ, ಉಪ್ಪಿನoಗಡಿ ಬ್ಲಾಕ್ ಅಧ್ಯಕ್ಷರಾದ ಡಾ. ರಾಜರಾಮ್, ಉಪ್ಪಿನಂಗಡಿ ಬ್ಲಾಕ್ ಪ್ರದಾನ ಕಾರ್ಯದರ್ಶಿ ಅಬ್ದುಲ್ ರೆಹಮಾನ್ ಮತ್ತು ಉಸ್ತುವಾರಿ ಗಳಾದ ಕೆ. ಎಂ. ಮುಸ್ತಫ, ವಿಜಯಕುಮಾರ್ ಸೊರಕೆ ಸಮಾಲೋಚನಾ ಸಭೆ ನಡೆಸಿದರು. ಸಭೆಯಲ್ಲಿ ಪದವೀಧರ ಕ್ಷೇತ್ರ ಅಭ್ಯರ್ಥಿ ಆಯನೂರು ಮಂಜುನಾಥ್, ಶಿಕ್ಷಕರ ಕ್ಷೇತ್ರ ಅಭ್ಯರ್ಥಿ ಡಾ ಕೆ. ಕೆ. ಮಂಜುನಾಥ್ ರವರ ಪರಿಚಯ ಪತ್ರ ಬಿಡುಗಡೆ ಗೊಳಿಸಲಾಯಿತು.

Sponsors

Related Articles

Back to top button