ಆತೂರು ಸ ಅದ್ ಮುಸ್ಲಿಯಾರ್ ನಿಧನಕ್ಕೆ ಕೆಸಿಎಫ್ ಒಮಾನ್ ಸಂತಾಪ…
ಒಮಾನ್: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯು ಇತ್ತೀಚೆಗೆ ನಿಧನರಾದ ಪ್ರಮುಖ ವಿದ್ವಾಂಸರು, ಸುನ್ನೀ ಜಮ್ಮೀಯ್ಯತುಲ್ ಮುಅಲ್ಲಿಮೀನ್ ರಾಜ್ಯಾಧ್ಯಕ್ಷರು, ಕರ್ನಾಟಕ ಸುನ್ನೀ ವಿಧ್ಯಾಭ್ಯಾಸ ಬೋರ್ಡ್ ಮುಫತ್ತಿಸ್ ಹಾಗೂ ಸದಸ್ಯರೂ,ಮರ್ಕಝ್ ತ ಅ್ ಲೀಮುಲ್ ಇಹ್ಸಾನ್ ಮೂಳೂರು ಇದರ ಸಹ ವ್ಯವಸ್ಥಾಪಕರಾದ ಆತೂರು ಸ ಅದ್ ಉಸ್ತಾದ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದೆ ಹಾಗೂ ಇವರ ಪರಲೋಕ ಜೀವನವನ್ನು ಅಲ್ಲಾಹನು ವಿಜಯಗೊಳಿಸಲಿ ಎಂದು ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.