ಗಾಂಧಿನಗರ ಜುಮಾ ಮಸ್ಜಿದ್ ಆಶ್ರಯದಲ್ಲಿ ಮಯ್ಯಿತ್ ಪರಿಪಾಲನಾ ಕಟ್ಟಡ ಲೋಕಾರ್ಪಣೆ ಮತ್ತು ಮಯ್ಯಿತ್ ಪರಿಪಾಲನಾ ಕಾರ್ಯಾಗಾರ…
ಸುಳ್ಯ: ಮುಹಿಯುದ್ದೀನ್ ಜುಮಾ ಮಸ್ಜಿದ್ ಗಾಂಧಿನಗರ ಸುಳ್ಯ ಇದರ ಆಶ್ರಯದಲ್ಲಿ ಅಲ್ ಇಖ್ವಾನ್ ಮಯ್ಯಿತ್ ಪರಿಪಾಲನಾ ಸಮಿತಿ ಸಹಭಾಗಿತ್ವದಲ್ಲಿ ದಾನಿಗಳ ಸಹಕಾರದೊಂದಿಗೆ ಗಾಂಧಿನಗರ ಜುಮಾ ಮಸೀದಿ ವಠಾರದಲ್ಲಿ ನೂತನವಾಗಿ ನಿರ್ಮಿಸಿದ ಸುಸಜ್ಜಿತ ಮತ್ತು ಸರ್ವಸನ್ನದ್ದ ಮಯ್ಯಿತ್ ಪರಿಪಾಲನಾ ಕಟ್ಟಡವನ್ನು ಸುಳ್ಯ ತಾಲೂಕು ಜಮೀಯತುಲ್ ಉಲಮಾ ಅಧ್ಯಕ್ಷ ಅಸ್ಸಯ್ಯದ್ ಕುಂಞಕೋಯ ತಂಗಳ್ ಲೋಕಾರ್ಪಣೆ ಮಾಡಿದರು.
ಅಧ್ಯಕ್ಷತೆಯನ್ನು ಗಾಂಧಿನಗರ ಜುಮ್ಮಾ ಮಸ್ಜಿದ್ ಅಧ್ಯಕ್ಷ ಕೆ. ಎಂ. ಮುಸ್ತಫ ವಹಿಸಿದ್ದರು.
ಮೊಗರ್ಪಣೆ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಜಿ ಇಬ್ರಾಹಿಂ ಸೀಫುಡ್ ನಾಮಫಲಕ ಅನಾವರಣ ಗೊಳಿಸಿದರು. ಗಾಂಧಿನಗರ ಖತೀಬರಾದ ಅಲ್ ಹಾಜ್ ಅಶ್ರಫ್ ಕಾಮಿಲ್ ಸಖಾಫಿ ದುವಾ ಪ್ರಾರ್ಥನೆಗೈದರು.ಗಾಂಧಿನಗರ ಮಸೀದಿಯ ನಿಕಟಪೂರ್ವ ಮುದರ್ರಿಸರಾದ ಶರಫುದ್ದೀನ್ ಸಅದಿ
ಶುಭಾಶಂಸನೆಗೈದರು. ಬಹು. ಜಮಾಲ್ ಸಖಾಫಿ ಅಧೂರ್ ಮಯ್ಯಿತ್ ಪರಿಪಾಲನಾ ಕಾರ್ಯಾಗಾರ ವನ್ನು ಪ್ರಾತ್ಯಕ್ಷಿಕೆ ಯೊಂದಿಗೆ ನಡೆಸಿಕೊಟ್ಟರು.
ವೇದಿಕೆಯಲ್ಲಿ
ಪೇರಡ್ಕ ಜುಮ್ಮಾಮಸೀದಿ ಗೌರವಾಧ್ಯಕ್ಷ ಟಿ.ಎಂ. ಶಹೀದ್, ಎಐಕೆಎಂಸಿಸಿ ಜಿಲ್ಲಾ ಖಜಾಂಜಿ ಕತ್ತರ್ ಇಬ್ರಾಹಿo ಹಾಜಿ ಮಂಡೆಕೋಲು, ಪೆರಾಜೆ ಜಮಾ ಮಸೀದಿ ಅಧ್ಯಕ್ಷ ಶಹೀದ್ ಕಲ್ಚರ್ಪೆ, ಇಖ್ರಾ ಜಾಮಿಯ ಮಸ್ಜಿದ್ ಅಧ್ಯಕ್ಷ ಅಬ್ದುಲ್ ಜಲೀಲ್, ಜಟ್ಟಿಪ್ಪಳ್ಳ ಬುಸ್ತಾನುಲ್ ಉಲೂo ಕಮಿಟಿ ಅಧ್ಯಕ್ಷ ಹಾಜಿ ಮಹಮ್ಮದ್ಎಸ್ಎಎಸ್,ಕುಂಭಕ್ಕೋಡ್ ಜುಮ್ಮಾ ಮಸ್ಜಿದ್ ಅಧ್ಯಕ್ಷ ಇಸ್ಮಾಯಿಲ್ ಸಅದಿ ಜಮಾಅತ್ ಕಮಿಟಿ ಮಾಜಿ ಅಧ್ಯಕ್ಷರುಗಳಾದ ಹಾಜಿ ಆದo ಕಮ್ಮಾಡಿ, ಹಾಜಿ ಕೆ. ಬಿ. ಮಹಮ್ಮದ್, ಪ್ರಧಾನ ಕಾರ್ಯದರ್ಶಿ ಕೆ. ಬಿ. ಅಬ್ದುಲ್ ಮಜೀದ್, ಉಪಾಧ್ಯಕ್ಷ ಹಾಜಿ ಮಹಮ್ಮದ್ ಕೆಎಂಎಸ್, ಖಜಾಂಚಿ ಮುಹಿಯದ್ದೀನ್ ಫ್ಯಾನ್ಸಿ,ಅಲ್ಇಖ್ವಾನ್ ಕಮಿಟಿ ಸಂಚಾಲಕ ಖಾದರ್ ಜಟ್ಟಿಪ್ಪಳ್ಳ
ಮುಸ್ಲಿಂ ಸೆಂಟ್ರಲ್ ಕಮಿಟಿ ಸಂಘಟನಾ ಕಾರ್ಯದರ್ಶಿ ಎಸ್.ಸಂಶುದ್ದೀನ್ ಗಾಂಧಿನಗರ ಜುಮ್ಮಾ ಮಸ್ಜಿದ್,ಮಾಜಿ ಅಧ್ಯಕ್ಷರುಗಳಾದ ಹಾಜಿ ಕೆ. ಬಿ. ಮಹಮ್ಮದ್, ಆದoಹಾಜಿ ಕಮ್ಮಾಡಿ ಜಮಾಅತ್ ಸಮಿತಿ ಉಪಾಧ್ಯಕ್ಷ ಹಾಜಿ ಕೆ. ಎಂ.ಮಹಮ್ಮದ್ ಕೆಎಂಎಸ್ ಬಾರ್ಪಣೆ ಖಜಾoಚಿ ಮುಹಿಯುದ್ದಿನ್ ಫ್ಯಾನ್ಸಿ ಕಾರ್ಯದರ್ಶಿ ಕೆ. ಬಿ. ಅಬ್ದುಲ್ ಮಜೀದ್ ನಿರ್ದೇಶಕರುಗಳಾದ ಕೆ. ಎಸ್. ಉಮ್ಮರ್, ಎಸ್. ಎ. ಹಮೀದ್ ಹಾಜಿ,ಹಮೀದ್ ಬೀಜಕೊಚ್ಚಿ, ಇಬ್ರಾಹಿಂ ಶಿಲ್ಪಾ,ಇಸ್ಮಾಯಿಲ್ ಹಾಜಿ,ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ಶುಕೂರ್ ಹಾಜಿ ನಗರ ಪಂಚಾಯಿತಿ ಸದಸ್ಯ ಶರೀಫ ಕಂಠಿ ಮೊದಲಾದವರು ಉಪಸ್ಥಿತರಿದ್ದರು.
ಗಾಂಧಿನಗರ ಮದರಸ ಮುಅಲ್ಲಿಂ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.