ತುಂಬೆ ಡ್ಯಾಂ – ವರತೆ ಭೂಮಿಗೂ ನ್ಯಾಯೋಚಿತ ಸೂಕ್ತ ಪರಿಹಾರಕ್ಕೆ ಮನವಿ…
ಬಂಟ್ವಾಳ: ತುಂಬೆ ಡ್ಯಾಂನಲ್ಲಿ 6.30 ಮೀಟರ್ ನೀರು ಸಂಗ್ರಹಿಸಲು ಜಿಲ್ಲಾಧಿಕಾರಿಗಳ ಆದೇಶದಂತೆ ಸಭೆ ಜರಗಿಸಿ ಮುಳುಗಡೆ ಭೂಮಿಗೆ ಪರಿಹಾರ ನೀಡಲು ಪ್ರಸ್ತಾವನೆ ತಯಾರಾಗುತ್ತಿದ್ದು, ಈ ಬಗ್ಗೆ ಕೇಂದ್ರ ಜಲ ಆಯೋಗದ ನಿರ್ದೇಶನದಂತೆ ವರತೆ ಭೂಮಿಗೂ ನ್ಯಾಯೋಚಿತ ಸೂಕ್ತ ಪರಿಹಾರ ಒದಗಿಸುವುದರ ಮೂಲಕ ರೈತರ ಹಿತಾಸಕ್ತಿಯನ್ನು ಕಾಪಾಡುವಂತೆ ವರತೆ ಪ್ರದೇಶ ಸೇರಿಸಿ 7:30 ಮೀಟರ್ ಗೆ ರೈತರ ಸಮಕ್ಷಮ ಸರ್ವೆ ನಡೆಸಿ ರೈತರಿಗೆ ಪರಿಹಾರ ಒದಗಿಸಿ ಕೊಡುವಂತೆ ಲಿಖಿತ ಮನವಿಯನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯಕ್ ಉಳಿಪಾಡಿಗುತ್ತು ಇವರಿಗೆ ತುಂಬೆ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿ ಅಧ್ಯಕ್ಷ ಎo ಸುಬ್ರಹ್ಮಣ್ಯ ಭಟ್, ಕಾರ್ಯದರ್ಶಿ ಸುದೇಶ್ ಮಯ್ಯ ಸಲ್ಲಿಸಿದರು.
ಮನವಿಗೆ ಸ್ಪಂದಿಸಿದ ಶಾಸಕರು ದೂರವಾಣಿ ಮೂಲಕ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ ವರತೆ ಪ್ರದೇಶ ಸೇರಿಸಿ ಸರ್ವೆ ಮಾಡಿಸಿ ರೈತರಿಗೆ ಪರಿಹಾರ ಒದಗಿಸುವಂತೆ ಸೂಚಿಸಿದರು. ಜಿಲ್ಲಾಧಿಕಾರಿಗಳು ವರತೆ ಪ್ರದೇಶ ಸೇರಿಸಿ ಸರ್ವೆ ಮಾಡಿಸಿ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.