ಸತತ 5ನೇ ದಿನವೂ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ…

ನವದೆಹಲಿ: ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ತೈಲ ಬೆಲೆ ಏರಿಕೆ ಇಂದೂ (ಗುರುವಾರ) ಮುಂದುವರೆದಿದ್ದು, ಗ್ರಾಹಕರಿಗೆ ಜೇಬಿಗೆ ಹೊರೆಯಾಗುತ್ತಿದೆ.
ಪ್ರತಿ ಲೀಟರ್ ಗೆ ತಲಾ 60 ಪೈಸೆ ಹೆಚ್ಚಳ ಮಾಡಲಾಗಿದೆ. ಪರಿಷ್ಕರಣೆಯಲ್ಲಿ 82 ದಿನಗಳ ವಿರಾಮ ಕೊನೆಯಾದ ನಂತರ ಸತತ ಐದನೇ ದಿನ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಕಂಡಿದೆ.
ಒಟ್ಟಾರೆ ಕಳೆದ ಐದು ದಿನಗಳಿಂದ ದೇಶದಲ್ಲಿ ಪೆಟ್ರೋಲ್ 2.74 ರೂ. ಮತ್ತು ಡಿಸೇಲ್ 2.83 ರೂ. ಏರಿಕೆಯಾಗಿದೆ.